ಅರಕಲಗೂಡು: ಮನೆ ಮುಂದೆ ಕಟ್ಟಿಹಾಕಿದ್ದ ಕುರಿಗಳು ಬೀದಿ ನಾಯಿಗಳಿಗೆ ಆಹಾರವಾದ ಘಟನೆ ತಾಲೂಕಿನ ಶಣವಿನಕುಪ್ಪೆ ಕೊಪ್ಪಲು ಗ್ರಾಮದಲ್ಲಿ ಗುರುವಾರ ನಡೆದಿದೆ. ಗ್ರಾಮದ ರಾಮೇಗೌಡ ಎಂಬುವವರು ಮನೆಯ ಮುಂದೆ ಕಟ್ಟಿ ಹಾಕಿದ್ದಾಗ ದಾಳಿ ಮಾಡಿದ ಬೀದಿ ನಾಯಿಗಳ ಹಿಂಡು ಕುರಿಗಳನ್ನು ಕಚ್ಚಿ ಸಾಯಿಸಿವೆ. ಈ ಸಂದರ್ಭ ಕೊಟ್ಟಿಗೆಯಲ್ಲಿ ಕೂಡಿದ್ದ ಐದಾರು ಕುರಿಗಳು ನಾಯಿಗಳ ದಾಳಿಗೆ ತುತ್ತಾಗದೇ ಪ್ರಾಣಾಪಾಯದಿಂದ ಪಾರಾಗಿವೆ. ಬೀದಿ ನಾಯಿ ದಾಳಿ ಬುಧವಾರವೂ ಸಹ ಶಣವಿನಕುಪ್ಪೆ ಗ್ರಾಮದಲ್ಲಿ ಕುರಿಯನ್ನು ಕಚ್ಚಿ ಸಾಯಿಸಿದ್ದವು. ಸಂಬಂಧಪಟ್ಟವರು ಇತ್ತ ಗಮನ ಹರಿಸಿ ನಾಯಿಗಳ ಹಾವಳಿ ನಿಯಂತ್ರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.