ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾಗೆ, ಗೂಬೆಗಳು ಅಪಶಕುನವಲ್ಲ, ಮಿತ್ರರು

Mainashree
Updated On : 25 Jul 2014, 11:20 am

ಕ.ಪ್ರ.ವಾರ್ತೆ ್ಣ ಹಳೇಬೀಡು ್ಣ ಜು.25
ಕಾಗೆ, ಗೂಬೆಗಳು ಅಪಶಕುನದ ಸಂಕೇತವಲ್ಲ. ಕಾಗೆ ಕ್ರಿಮಿಕೀಟಗಳನ್ನು ಸೇವಿಸಿ ರೈತನ ಉಪಕಾರಿಯಾದರೆ. ಗೂಬೆಗಳು ರಾತ್ರಿ ಸಂಚಾರ ನಡೆಸಿ ಧಾನ್ಯ ನಾಶ ಮಾಡುವ ಇಲಿಗಳನ್ನು ತಿನ್ನುವ ಮುಖಾಂತರ ರೈತನಿಗೆ ಮಿತ್ರರಾಗಿವೆ. ಇವನ್ನೆಲ್ಲ ಗಮನಿಸಿದರೆ ವಿಜ್ಞಾನದ ಅರಿವಾಗುತ್ತದೆ ಎಂದು ಬಾಳೇನಹಳ್ಳಿ ಕಾಲೇಜು ಪ್ರಾಂಶುಪಾಲ ಎಚ್.ಸಿ.ಸ್ವಾಮಿ ಹೇಳಿದರು.
ಇಲ್ಲಿಗೆ ಸಮೀಪದ ಅಡಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ರಾಜ್ಯ  ವಿಜ್ಞಾನ ಪರಿಷತ್ ಹಾಸನ ಘಟಕದ ಆಶ್ರಯದಲ್ಲಿ ಇತ್ತೀಚೆಗೆ ನಡೆದ ನಿಮ್ಮ ಬಳಿಗೆ ವಿಜ್ಞಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿರು.
ಜೀವ ವೈವಿಧ್ಯತೆ: ಪರಿಸರದ ಅಸಮತೋಲನದಿಂದ ಆಗುಂಬೆಯಲ್ಲಿಯೂ ಸಹ ಮಳೆಯ ಪ್ರಮಾಣ ಕ್ಷೀಣಿಸುತ್ತಿದೆ. ಮರಗಳ ನಾಶದಿಂದ ಜೀವ ವೈವಿಧ್ಯಗಳಿಗೆ ಹೊಡೆತ ಬಿದ್ದಿದೆ. ಪರಿಸರದ ಉಳಿವಿಗಾಗಿ ಗಟ್ಟಿಯಾದ ಧ್ವನಿ
ಎತ್ತಬೇಕಾಗಿದೆ. ಪರಿಸರ ಹಾಗೂ ಜೀವ ವೈವಿಧ್ಯತೆ ಇಲ್ಲದೆ ಮಾನವ ಹೆಚ್ಚು ಕಾಲ ಬದಕಲು ಸಾಧ್ಯವಿಲ್ಲ ಎಂದರು.
 ಮುಖ್ಯಶಿಕ್ಷಕ ಎಸ್.ಎನ್. ಬೀರೇಗೌಡ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಶಿಕ್ಷಕ ಮಂಜುನಾಥ್, ಉಪನ್ಯಾಸಕ ಸಂತೋಷ್ ಕುಮಾರ್, ಮಾತನಾಡಿದರು. ಶಿಕ್ಷಕರಾದ ರವಿಕುಮಾರ್, ಜಯಣ್ಣ, ಕೆ.ವಿ.ಲಿಂಗಪ್ಪ, ವಾಣಿ, ದ್ಯಾವಮ್ಮ, ಕಿರಣ್ ಕುಮಾರ್ ಇದ್ದರು. ವಿಜ್ಞಾನ ಶಿಕ್ಷಕಿ ಅನ್ನಪೂರ್ಣ  ಸ್ವಾಗತಿಸಿದರು. ಶಿಕ್ಷಕಿ ಉಮಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement