ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವೈದ್ಯರು ನಿಸ್ವಾರ್ಥ ಸೇವೆ ಸಲ್ಲಿಸಲಿ

Mainashree
Updated On : 25 Jul 2014, 11:20 am

ಕ.ಪ್ರ.ವಾರ್ತೆ ್ಣ ಹೊಳೆನರಸೀಪುರ ್ಣ ಜು.25
ವೈದ್ಯರು ತಮ್ಮ ವೃತ್ತಿ ಬದುಕಿನಲ್ಲಿ ಹಣದ ಹಿಂದೆ ಬಿದ್ದಲ್ಲಿ ಯಾವ ಗುರಿಯನ್ನೂ ಮುಟ್ಟಲಾಗದು. ಬದಲಿಗೆ ಸೇವೆಯನ್ನೇ ಗುರಿಯಾಗಿಸಿಕೊಂಡಲ್ಲಿ ಈ ಸಮಾಜ ವೈದ್ಯರಲ್ಲೇ ದೇವರನ್ನು ಕಾಣುತ್ತದೆ ಎಂದು ಮೈಸೂರಿನ ಪಿಕೆಟಿಬಿ ಆಸ್ಪತ್ರೆಯ ನಿವೃತ್ತ ವೈದ್ಯಾಧಿಕಾರಿ ಡಾ.ಜಿ.ಎಂ.ಕುದ್ರಿ ಅವರು ವೈದ್ಯರಿಗೆ  ಕಿವಿಮಾತು ಹೇಳಿದರು.
 ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ  ಗುರುವಾರ ಹಮ್ಮಿಕೊಳ್ಳಲಾಗಿದ್ದ ವೈದ್ಯರ ದಿನಾಚರಣೆ ಹಾಗೂ ಭಾರತ ರತ್ನ ಡಾ.ಬಿ.ಸಿ.ರಾಯ್ ಅವರ ಸಂಸ್ಮರಣಾ ದಿನಾಚರಣೆಯಲ್ಲಿ ವೈದ್ಯರುಗಳು ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಿಸ್ವಾರ್ಥ ಸ್ವೆ ಸಲ್ಲಿಸಿ: ಆರೋಗ್ಯ ಇಲಾಖೆಯ ನಿವೃತ್ತ ಯೋಜನಾ ನಿರ್ದೇಶಕರಾದ ಡಾ.ಬಿ.ರಾಜು ಅವರು ಸಮಾರಂಭದಲ್ಲಿ ಅವರು ಮಾತನಾಡುತ್ತಾ, ವೈದ್ಯರು ಸಾಮಾಜಿಕ ಹಾಗು ಸಾಂಘಿಕ ಸೇವೆಯಿಂದ ಇಡೀ ಆಸ್ಪತ್ರೆಯು ಆಯಾ ಪ್ರದೇಶದಲ್ಲಿ ಉತ್ತಮ ಗೌರವ ಪಡೆಯಬಹುದಾಗಿದೆ. ಸ್ವಾರ್ಥ  ಮತ್ತು ಪ್ರಲೋಭನೆಗಳಿಲ್ಲದ ವೈದ್ಯರ ಸೇವೆ ಸಮಾಜದಲ್ಲಿ ಹೆಚ್ಚಿನ ಗೌರವವನ್ನು ತಂದು ಕೊಡುತ್ತದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಎಚ್.ಎನ್. ರಾಜೇಶ್ ಮಾತನಾಡಿ, ಸಾಮಾಜಿಕ ಸೇವೆಯ ಮಧ್ಯೆ ವೈದ್ಯರುಗಳಿಗೂ ಅವರದೇ ಆದ ವೈಯಕ್ತಿಕ ಬದುಕು, ಚಿಂತನೆ ಹಾಗೂ ಜವಾಬ್ದಾರಿಗಳಿದ್ದರೂ ಅವುಗಳೆಲ್ಲವನ್ನೂ ಬದಿಗಿಟ್ಟು ವೃತ್ತಿಯನ್ನು ಕೈಗೊಂಡಲ್ಲಿ ವೈದ್ಯ ವೃತ್ತಿಯ ಗೌರವ ಹೆಚ್ಚುತ್ತದೆ ಎಂದರು.
ಸನ್ಮಾನ: ನಿವೃತ್ತ ವೈದ್ಯಾಧಿಕಾರಿ ಡಾ.ಜಿ.ಎಂ.ಕುದ್ರಿ, ಡಾ.ಬಿ.ರಾಜು ಹಾಗೂ ಇಲ್ಲಿನ ಆಸ್ಪತ್ರೆಯಿಂದ ಬೇರೆಡೆಗೆ ವರ್ಗಾವಣೆಗೊಂಡಿರುವ, ಬೇರೆಡೆಯಿಂದ ಇಲ್ಲಿನ ಆಸ್ಪತ್ರೆಗೆ ವರ್ಗಾವಣೆಗೊಂಡು ಬಂದಿರುವ ಹಾಗೂ ನಿವೃತ್ತಿಯಾಗಿರುವ ವೈದ್ಯರು ಮತ್ತು ಸಿಬ್ಬಂದಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಇಲ್ಲಿನ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಹಾಗೂ ಸಿಬ್ಬಂಧಿಗಳ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಟಿ.ಎಸ್.ಲಕ್ಷ್ಮೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ಡಾ. ದಿನೇಶ್ ಭಾರತರತ್ನ ಡಾ.ಬಿ.ಸಿ.ರಾಯ್ ಅವರ ವ್ಯಕ್ತಿ ಪರಿಚಯ ಹಾಗೂ  ಡಾ.ಡಿ.ನಟರಾಜ್ ಸನ್ಮಾನಿತ ಡಾ.ಜಿ.ಎಂ.ಕುದ್ರಿ
ಅವರನ್ನು ಪರಿಚಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement