ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಪರಾಧ ಸುದ್ದಿಗಳು

Mainashree
Updated On : 26 Jul 2014, 10:02 am

ವಾಹನ ಡಿಕ್ಕಿ: ಅಪರಿಚಿತ ವ್ಯಕ್ತಿ ಸಾವು
ಅರಸೀಕೆರೆ: ವಾಹನವೊಂದಿ ಡಿಕ್ಕಿ ಹೊಡೆದ ಪರಿಣಾಮ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಬಾಣಾವರದಲ್ಲಿ ಶುಕ್ರವಾರ ನಡೆದಿದೆ. ಬಾಣಾವರದ ವಾಸಿ ರವಿ ಅವರು ಬೈಕಿಗೆ ಪೆಟ್ರೋಲ್ ಹಾಕಿಸಲೆಂದು  ಕಡೂರು ರಸ್ತೆಯಲ್ಲಿ ಕೆಪಿಎಸ್ ಪೆಟ್ರೋಲ್ ಬಂಕ್‌ಗೆ ಹೋಗಿ ಪೆಟ್ರೋಲ್ ಹಾಕಿಸಿ ಹೊರಬರುತ್ತಿರುವಾಗ  ಪೆಟ್ರೋಲ್ ಬಂಕ್ ಹತ್ತಿರ ಯಾರೋ ಮೃತಪಟ್ಟಿರುವುದು ಕಂಡುಬಂದಿದ್ದು, ಬಾಣಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವ್ಯಕ್ತಿಯ ಸಾವು ಅಪಘಾತದಿಂದ ಸಂಭವಿಸಿರುವಂತೆ ಕಂಡು ಬಂದಿದ್ದು, ಮೃತಪಟ್ಟ ವ್ಯಕ್ತಿಯು ಭಿಕ್ಷುಕನಂತೆ  ಕಂಡು ಬರುತ್ತಾನೆಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
24 ಜೂಜುಕೋರರ ಬಂಧನ
ಹಾಸನ: ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ ಅಂದರ್ ಬಾಹರ್ ಜೂಜಾಡುತ್ತಿದ್ದ 24 ಮಂದಿಯನ್ನು ಪೊಲೀಸರು  ಬಂಧಿಸಿರುವ ಘಟನೆ ಇತ್ತೀಚೆಗೆ ನಡೆದಿದೆ. ಸಕಲೇಶಪುರ ತಾಲೂಕು  ಯಸಳೂರು ಹೋಬಳಿಯ ಬಸಗುಳ ಗ್ರಾಮದ ಜಯಪ್ಪ ಎಂಬವರ ಶೆಡ್‌ನಲ್ಲಿ ಜೂಜಾಡುತ್ತಿದ್ದ 16 ಮಂದಿಯನ್ನು ಬಂಧಿಸಿರುವ ಪೊಲೀಸರು  ರು. 10,050 ನಗದು ಮತ್ತು 14 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಚಂಗಡಿಹಳ್ಳಿ ಗ್ರಾಮದ ನಾಗೇಂದ್ರ (29), ಹೊಸೂರು ಗ್ರಾಮದ ಶಿವಣ್ಣ  (55), ಚಂಗಡಿಹಳ್ಳಯ ವಸಂತ (38), ಮಿಥುನ್(26), ಚಂದ್ರೇಗೌಡ(53), ಬಸಗುಳ ಗ್ರಾಮದ ಜಯಪ್ಪ(38), ಚಂಗಡಿಹಳ್ಳಿಯ ಪುನೀತ್( 23), ಹೆರೂರು ಗ್ರಾಮದ ರಾಜು (29), ರತನ್ (32),  ಬಸಗುಳ ಗ್ರಾಮದ ಸಾಗರ್, ಸೋಮವಾರಪೇಟೆ ತಾಲೂಕು ಶನಿವಾರ ಸಂತೆಯ ಲೆಕ್ಕನಹಾಲ್ ಗ್ರಾಮದ ಉದಯ್(27), ನಂದಳ್ಳಿ ಗ್ರಾಮದ ಸುರೇಶ್ ಉರುಫ್ ಸತೀಶ್( 30), ಚಂಗಡಿಹಳ್ಳಿ ಗ್ರಾಮದ ಸುನಿಲ್(35), ಶೇಖರ್ (28), ಮಥೂರ್ ಗ್ರಾಮದ ವೇದಮೂರ್ತಿ(28), ಹೆರೂರು ಗ್ರಾಮದ ಮಂಜುನಾಥ(56) ಎಂಬವರೇ ಬಂಧಿತ ಆರೋಪಿಗಳು.  ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 10,050 ನಗದು, 14 ಮೊಬೈಲ್‌ಗಳನ್ನು ವಶಪಡಿಸಿಕೊಂಡಿರುವ ಯಸಳೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ  ಸಕಲೇಶಪುರದ ಹೆತ್ತೂರು ಗ್ರಾಮದ ಹೇಮಂತ್ ಸರ್ವೀಸ್ ಸ್ಟೇಷನ್‌ನಲ್ಲಿ ಅಂದರ್ ಬಾಹರ್ ಜೂಜಾಡುತ್ತಿದ್ದ 8 ಮಂದಿಯನ್ನು  ಪೊಲೀಸರು ಬಂಧಿಸಿದ್ದಾರೆ. ಗುಂಡಿಗಿರೆ ಗ್ರಾಮದ ಆನಂದ (30), ಪ್ರವೀಣ (23),ಕೊನಬನಹಳ್ಳಿಯ ಧರ್ಮಪ್ಪ (28), ರಘು(24), ಬವನಹಳ್ಳಿಯ ಪವನ(23), ಹೆತ್ತೂರಿನ ಸಂದೀಪ (30), ಬನಹಳ್ಳಿಯ ಕರುಣ (30), ಮೊಗಲಿ ಗ್ರಾಮದ ಓಂಕಾರ (40) ಎಂಬವರೇ ಬಂಧಿತ ಆರೋಪಿಗಳು. ಪಣಕ್ಕಿಟ್ಟಿದ್ದ ರು. 1932 ನಗದನ್ನು ವಶಪಡಿಸಿಕೊಂಡಿರುವ ಯಸಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಕ್ರಮ ಮದ್ಯ ಮಾರಾಟ: ವ್ಯಕ್ತಿ ಬಂಧನ
ಸಕಲೇಶಪುರ: ತಾಲೂಕಿನ  ಹೆತ್ತೂರು ಗ್ರಾಮದ ದೇವರಾಜು  ಎಂಬವರ ಎಸ್.ಎಸ್.ಟೆಲಿಲಿಂಕ್ಸ್ ಅಂಗಡಿಯಲ್ಲಿ ಪರವಾನಗಿ ಇಲ್ಲದೆ  ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಆರೋಪಿ  ಸಂದೀಪ (28) ಎಂಬಾತನನ್ನು  ಬಂಧಿಸಿದ್ದಾರೆ.ಅಕ್ರಮವಾಗಿ ಮಾರಾಟಕ್ಕಿಟ್ಟಿದ್ದ 90 ಎಂಎಲ್‌ನ 40 ಬ್ರಾಂದಿ ಪ್ಯಾಕೇಟ್‌ಗಳು ಹಾಗೂ 180 ಎಂ.ಎಲ್‌ನ 25 ಕೊಡೇಸ್ ಮದ್ಯ ಸೇರಿದಂತೆ ಒಟ್ಟು ರು.ms
 2251ಬೆಲೆಯ ಮದ್ಯ ವಶಪಡಿಸಿಕೊಂಡಿದ್ದಾರೆ. ಯಸಳೂರು ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಯನ್ನು ನ್ಯಾಯಾಲಯಕ್ಕೆ  ಹಾಜರುಪಡಿಸಿದ್ದಾರೆ.
ಪ್ರತ್ಯೇಕ ಪ್ರಕರಣ; ಮೂವರು ನಾಪತ್ತೆ
ಹಾಸನ: ಜಿಲ್ಲೆಯ ಪ್ರತ್ಯೇಕ ಸ್ಥಳಗಳಿಂದ ಮೂವರು ನಾಪತ್ತೆಯಾಗಿರುವ ಘಟನೆ ಇತ್ತೀಚೆಗೆ ನಡೆದಿದೆ.ಅರಸೀಕೆರೆ ತಾಲೂಕಿನ ಕಣಕಟ್ಟೆ ಹೋಬಳಿಯ ಗಿರಿಬೊಮ್ಮೇನಹಳ್ಳಿ ಗ್ರಾಮದ ಸುಶೀಲಮ್ಮ ಎಂಬವರ ಪುತ್ರಿ  ಲತಾಮಣಿ (26)ಮನೆಯಿಂದ ಹೋದವಳು ವಾಪಸ್ ಮನೆಗೆ ಬಾರದೆ  ನಾಪತ್ತೆಯಾಗಿರುವ ಘಟನೆ ನಡೆದಿದೆ. 5ಅಡಿ ಎತ್ತರ, ಕನ್ನಡ ಮತ್ತು ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಕಂದು ಬಣ್ಣದ ಚೂಡಿದಾರ ಧರಿಸಿದ್ದರು. ಈ ಯುವತಿಯು ಪತ್ತೆಯಾದಲ್ಲಿ ಬಾಣಾವರ  ಠಾಣೆ  ದೂಸಂ 08174-235633 ಕ್ಕೆ ಸಂಪರ್ಕಿಸುವುದು. ಮತ್ತೊಂದು ಪ್ರಕರಣದಲ್ಲಿ ದಿನಾಂಕ ಅರಸೀಕೆರೆ ಪಟ್ಟಣದ  ಸಿದ್ದಪ್ಪನಗರದ 5 ನೇ ಕ್ರಾಸ್ ವಾಸಿ ಬಾಬು ಎಂಬವರ ಪುತ್ರಿ  ಹೀನಾ (21) ಮನೆಯಿಂದ ಮೆಡಿಕಲ್ ಸ್ಟೋರ್‌ಗೆ ಕೆಲಸಕ್ಕೆ ಹೋದವರು ನಾಪತ್ತೆಯಾಗಿದ್ದಾರೆ. ಕನ್ನಡ ಮಾತನಾಡುತ್ತಾಳೆ. ಕಾಣೆಯಾದ ಹುಡುಗಿ ಪತ್ತೆಯಾದಲ್ಲಿ  ಅರಸೀಕೆರೆ ನಗರ  ಠಾಣೆ  ದೂ.ಸಂ. 08174-232233 ಸಂಪರ್ಕಿಸಲು ಕೋರಲಾಗಿದೆ.ಇನ್ನೊಂದು ಪ್ರಕರಣದಲ್ಲಿ ಸಕಲೇಶಪುರ ತಾಲೂಕಿನ ಅತ್ತಿಹಳ್ಳಿಗ್ರಾಮದ ವಾಸಿ ಸೋಮ ಎಂಬವರ ಪತ್ನಿ ರಜಿನಿ (24) ಮನೆಯಿಂದ ಹೊರಗೆ ಹೋದವರು ವಾಪಸ್ಸು ಮನೆಗೆ ಬಂದಿಲ್ಲ. 5 ಅಡಿ ಎತ್ತರ, ದುಂಡುಮುಖ, ಎಣ್ಣೆಗೆಂಪುಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ನೀಲಿ ಬಣ್ಣದ ಚೂಡಿದಾರ ಧರಿಸಿದ್ದರು ಎನ್ನಲಾಗಿದೆ. ಈ ಮಹಿಳೆ  ಪತ್ತೆಯಾದಲ್ಲಿ ಯಸಳೂರು ಠಾಣೆ ದೂ.ಸಂ. 08173-278212 ಸಂಪರ್ಕಿಸಲು ಕೋರಲಾಗಿದೆ.
ರೈಲಿನಲ್ಲಿ ಅಪರಿಚಿತ ವ್ಯಕ್ತಿ ಸಾವು
ಮೈಸೂರು: ಮೈಸೂರಿನಿಂದ ಅರಸೀಕೆರೆಗೆ ಹೋಗುವ ಪ್ಯಾಸೆಂಜರ್ ರೈಲಿನ ಬೋಗಿಯಲ್ಲಿ 60 ವರ್ಷದ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ. ಚಹರೆ- 5.3 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಕೃಶವಾದ ಶರೀರ, ದುಂಡುಮುಖ, ತಲೆಯಲ್ಲಿ 2 ಇಂಚು ಉದ್ದದ ಕಪ್ಪು- ಬಿಳಿ ಕೂದಲು, ಮುಖದಲ್ಲಿ ಅರ್ಧ ಇಂಚು ಉದ್ದ ಕಪ್ಪು- ಬಿಳಿ ಗಡ್ಡ ಮೀಸೆ ಇದೆ. ನೀಲಿ ಮತ್ತು ಬಿಳಿ ಬಣ್ಣದ ಚೌಕಳಿ ಇರುವ ತುಂಬು ತೋಳಿನ ಸ್ವೆಟರ್, ನೀಲಿ ಮತ್ತು ಬಿಳಿ ಬಣ್ಣದ ಚೌಕಳಿ ಇರುವ ಅರ್ಧ ತೋಳಿನ ಶರ್ಟ್, ಸಿಮೆಂಟ್ ಬಣ್ಣದ ಪ್ಯಾಂಟು ಧರಿಸಿದ್ದಾರೆ. ಮೃತ ದೇಹವನ್ನು ಮೈಸೂರು ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಇರಿಸಲಾಗಿದೆ. ಮೃತರ ವಾರಸುದಾರರಿದ್ದಲ್ಲಿ ದೂ.0821- 2516579 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement