ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹೊಳೆನರಸೀಪುರ ತಾಲೂಕು ಸಾಹಿತ್ಯ ಸಮ್ಮೇಳನ ಇಂದು

Mainashree
Updated On : 27 Jul 2014, 10:24 am

ಹೊಳೆನರಸೀಪುರ: ಪಟ್ಟಣದಲ್ಲಿ ಜು. 28 ರಂದು ನಡೆಯಲಿರುವ 4ನೇ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿನ ಭವ್ಯ ಮೆರವಣಿಗೆಯಲ್ಲಿ ಸಾಗಿ ಕನ್ನಡದ ಸಾಹಿತ್ಯದ ತೇರನ್ನು ಎಳೆಯುವ ಗುರುತರವಾದ ಜವಾಬ್ದಾರಿಯನ್ನು ತಾಲೂಕಿನ ಸಾಹಿತಿಗಳು, ಚಿಂತಕರು ಹಾಗೂ ಕನ್ನಡಾಭಿಮಾನಿಗಳು ಸಮ್ಮೇಳನಾಧ್ಯಕ್ಷರಾಗಿ ಅಯ್ಕೆಯಾಗಿರುವ ಸಾಹಿತಿ ವೈ.ಎನ್.ನಾಗೇಶ್ ಕೌಂಡಿನ್ಯ  ಅವರಿಗೆ ನೀಡಿದ್ದಾರೆ.
 ತಾಲೂಕಿನಲ್ಲಿ ನಡೆಯಲಿರುವ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಕೌಂಡಿನ್ಯ ಕಾವ್ಯನಾಮದೊಂದಿಗೆ ಚಿರಪರಿಚಿತರಾಗಿರುವ ವೈ.ಎನ್.ನಾಗೇಶ್ ಅವರು ವೈ.ಬಿ.ನಾರಾಯಣರಾವ್ ಹಾಗೂ ಜಯಲಕ್ಷ್ಮಿ ದಂಪತಿಗಳ ಪುತ್ರರಾಗಿ 1960ರಲ್ಲಿ ಸಕಲೇಶಪುರದಲ್ಲಿ ಜನಿಸಿದ್ದು ಇವರು ಎಂಕಾಂ ಪದವೀಧರರಾಗಿದ್ದಾರೆ.
ಕಾದಂಬರಿಕಾರ: ಧಾರ್ಮಿಕ ಲೇಖನ, ಪುಸ್ತಕಗಳು ಹಾಗೂ ಕಾದಂಬರಿಗಳಲ್ಲದೇ ನಾಡಿನ ವಿವಿಧ ಪತ್ರಿಕೆಗಳಲ್ಲಿ ಇವರ 310ಕ್ಕೂ ಹೆಚ್ಚು ಕಾದಂಬರಿಗಳು ಪ್ರಕಟವಾಗಿದ್ದು, ಇವರ ಸುಮಾರು 42ಕ್ಕೂ ಹೆಚ್ಚು ಕಾದಂಬರಿಗಳು ಕನ್ನಡಪ್ರಭ ದಿನಪತ್ರಿಕೆಯಲ್ಲಿಯೇ ಪ್ರಕಟವಾಗಿರುವುದು ವಿಶೇಷವಾಗಿದೆ.
  ಹಲವಾರು ಟಿವಿ ಧಾರವಾಹಿಗಳಿಗೂ ಕಥೆ-ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಕೌಂಡಿನ್ಯ ಅವರು ಬರೆದಿದ್ದಾರೆ. ನಿರೀಕ್ಷೆ, ವರ್ತುಲ, ಮಾನ್ಯ ಮತದಾರರೆ, ಶಾಲ್ಮಲಿ, ಇದುವೇ ಜೀವನ, ಸಾಫಲ್ಯ, ಅಂತರಂಗದ ಮೃದಂಗ, ಬಾಳು ಒಂದು ಬಂಡಿ, ಮನ ಮಂದಾರ ಹಾಗೂ ಸ್ಪಂದನ ಮೊದಲಾದ ಇವರ ಜನಪ್ರಿಯ ಕಾದಂಬರಿಗಳು ನಾಲ್ಕು ಬಾರಿ ಮುದ್ರಣ ಕಂಡಿವೆ.
120 ಸಣ್ಣ ಕಥೆ: ಕಣ್ಮಣಿ ಕುಣಾಲ, ಬಾಪೂಜಿ ಕಂಡ ಭಾರತ, ವೀರ ಪುರೂರವ ಹಾಗೂ ಮೈಸೂರಿನ ಮಹಾರಾಜರು ಇವರ ಚಾರಿತ್ರಿಕ ಕಾದಂಬರಿಗಳಾದರೆ, ಗುರು ಚರಿತ್ರೆ, ಮಹಾಭಾರತ ಹಾಗೂ ಪುಣ್ಯಕ್ಷೇತ್ರಗಳು ಕೌಂಡಿನ್ಯ  ಬರೆದಿರುವ ಧಾರ್ಮಿಕ ಪುಸ್ತಕಗಳಾಗಿವೆ.  120ಕ್ಕೂ ಹೆಚ್ಚು ಸಣ್ಣಕಥೆಗಳನ್ನು ಬರೆದಿದ್ದಾರೆ.
ವಿವಿಧ ಪ್ರಶಸ್ತಿ: ಇವರ ಸಾಹಿತ್ಯ ಕೃಷಿಗಾಗಿ ಜ್ವಾಲನಯ್ಯನವರ ಸಾಹಿತ್ಯಶ್ರೀ ಪ್ರಶಸ್ತಿ, ಮಂಗಳೂರಿನ ಸಾಧನ ಪ್ರಶಸ್ತಿ-2007, ಶಿವಮೊಗ್ಗದ ಸಾಹಿತ್ಯಶ್ರೀ ಸಂಘದವರು ನೀಡಿರುವ ಸಹ್ಯಾದ್ರಿಶ್ರೀ ಪ್ರಶಸ್ತಿ, ಬಿಜಾಪುರದಲ್ಲಿ ನಡೆದ 79ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ ಗೌರವ ಪಡೆದಿರುವ ಇವರಿಗೆ ಅನೇಕ ಸಂಘ ಸಂಸ್ಥೆಗಳು ಆದರದಿಂದ ಸನ್ಮಾನಿಸಿವೆ.  ಎಚ್.ಎಸ್.ಪುಟ್ಟಸೋಮಪ್ಪ ಅವರ ಅಧ್ಯಕ್ಷತೆಯ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕವು ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಸಕಲ ಸಿದ್ಧತೆ ನಡೆದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement