ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನಾಡಪ್ರಭು ಕೆಂಪೇಗೌಡರ 50ನೇ ಜಯಂತ್ಯುತ್ಸವ

Rashmi Kasaragodu
Updated On : 30 Jul 2014, 10:49 am

ಹಾಸನ: ನಗರದ ತಣ್ಣೀರುಹಳ್ಳ ಎಂ.ಕೆ. ಕನ್‌ವೆನ್‌ಷನ್ ಹಾಲ್‌ನಲ್ಲಿ ಕರ್ನಾಟಕ ವೀರಕನ್ನಡಿಗರ ಸೇನೆವತಿಯಿಂದ ಇತ್ತೀಚೆಗೆ ನಾಡಪ್ರಭು ಕೆಂಪೇಗೌಡರ 50ನೇ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿತ್ತು.
 ಕಾರ್ಯಕ್ರಮ ಉದ್ಘಾಟಿಸಿದ ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಮಾತನಾಡಿ, ಇಂತಹ ನೂರಾರು ಸಂಘಟನೆಗಳು ಉದಯಿಸಿ ನಾಡಿನ ಏಳಿಗೆಗೆ ದುಡಿಯುವಂತಾರಗಬೇಕು ಎಂದು ಆಶೀರ್ವದಿಸಿದರು.
ಸಂಘಟಿತರಾಗಿ: ಸಂಘಟನೆಯ ರಾಜ್ಯಾಧ್ಯಕ್ಷ ಕೆ.ಟಿ. ರವೀಂದ್ರಕುಮಾರ್ ಮಾತನಾಡಿ, ನಾಡು-ನುಡಿಯ ಜಾಗೃತಿಗಾಗಿ ಪ್ರತಿ ಕನ್ನಡಿಗರೂ ಪುರುಷ ಸಿಂಹಗಳಾಗಿ ಸಂಘಟಿತರಾಗಬೇಕು. ನಾಡಿನ ಜ್ವಲಂತ ಸಮಸ್ಯೆಗಳಿಗೆ ಸಂಘಟನೆ ಸದಾ ದುಡಿಯುತ್ತಿದ್ದು, ಗಡಿ ನುಡಿ ಹಾಗೂ ಜಲಕ್ಕೆ ಸಂಭವಿಸಿರುವ ವಿಪತ್ತನ್ನು ನಿವಾರಿಸಲು ಎಲ್ಲಾ ಕನ್ನಡಿಗರು ಮುಂದಾಗಬೇಕು ಎಂದು ಕರೆ ನೀಡಿದರು.
ಮೆರವಣಿಗೆ: ಹಿರಿಯ ಸಾಹಿತಿ ಮಳಲಿ ವಸಂತಕುಮಾರ್, ಶಿಕ್ಷಕಿ ಮೈಮು ಮತ್ತು ಚಲನಚಿತ್ರ ನಟ ಶ್ರೀನಗರ ಕಿಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಮೊದಲು ನಗರದ ಆರ್.ಸಿ. ರಸ್ತೆ ಬಳಿ ಇರುವ ಶಾಲಾ ಮೈದಾನದಿಂದ  ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
 ಕಾರ್ಯಕ್ರಮದಲ್ಲಿ ಕರ್ನಾಟಕ ವೀರಕನ್ನಡಿಗರ ಸೇನೆ ಜಿಲ್ಲಾಧ್ಯಕ್ಷ ಹೆಚ್.ಎನ್. ನಟೇಶ್, ಸಂಘಟನಾ ಕಾರ್ಯದರ್ಶಿ ಆನಂದ್, ನಗರಸಭೆ ಅಧ್ಯಕ್ಷೆ  ಶ್ರೀವಿದ್ಯಾ ಆನಂದ್, ಸದಸ್ಯರಾದ ಶಾರದಮ್ಮ, ಅಮೀರ್ ಜಾನ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ  ಸಮೀರ್, ನಂಜುಂಡಸ್ವಾಮಿ, ಉಪಾಧ್ಯಕ್ಷ ಅನಂತರಾಜ್, ಜಮೀರ್, ತೌಫಿಕ್ ಪಾಷ, ರಾಜೇಶ್, ರಾಜು ಇತರರು ಇದ್ದರು. ಶಂಕರೇಗೌಡ ನಿರೂಪಿಸಿದರು. ಜಾವಗಲ್ ಪ್ರಸನ್ನ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement