ಪದಾಧಿಕಾರಿಗಳ ಆಯ್ಕೆ
ಹೊಳೆನರಸೀಪುರ; ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಹೊಳೆನರಸೀಪುರ ತಾಲೂಕು ಘಟಕಕ್ಕೆ 2014ರಿಂದ 2019ರ ಐದು ವರ್ಷಗಳ ಅವಧಿಗೆ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ತಾಲೂಕಿನ ದೊಡ್ಡಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಎಂ. ಜಗದೀಶ್ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.
ಇನ್ನುಳಿದಂತೆ ತಾಲೂಕಿನ ಪ್ರೌಢಶಾಲಾ ಶಿಕ್ಷಕರುಗಳಾದ ಮಹಾಲಿಂಗಪ್ಪ-ಉಪಾಧ್ಯಕ್ಷ, ಎಂ.ಈ.ಮಧುಸೂದನ-ಕಾರ್ಯದರ್ಷಿ, ಟಿ.ಸಿ.ಲೋಕೇಶ್ ಖಜಾಂಚಿ, ಬೊಮ್ಮಯ್ಯ ನಾಯಕ-ಸಹ-ಕಾರ್ಯದರ್ಶಿ, ಕೃಷ್ಣೇಗೌಡ-ಸಂಘಟನಾ ಕಾರ್ಯದರ್ಶಿ, ಸಂಗಪ್ಪ ಎಂ ರಕ್ಕಸಗಿ-ರಾಜ್ಯ ಪರಿಷತ್ ಸದಸ್ಯರಾಗಿ ಆಯ್ಕೆಗೊಂಡರೆ, ಎಂ. ಜವರೇಗೌಡ, ಡಿ. ರಂಗಸ್ವಾಮಿ ಹಾಗೂ ಕೆ. ಶಿವಕುಮಾರಾಚಾರಿ ಅವರುಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಪದಾಧಿಕಾರಿಗಳ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಡಿ. ಮಹದೇವ ತಿಳಿಸಿದ್ದಾರೆ.