ಪೊಲೀಸರಿಗೆ ವಸತಿ: ಸಚಿವ
ಹಾಸನ: ರಾಜ್ಯದಲ್ಲಿ ಒಟ್ಟು 74,251 ಪೊಲೀಸ್ ಸಿಬ್ಬಂದಿಯ ಈ ಪೈಕಿ 39,482 ಮಂದಿ ವಸತಿ ಗೃಹಗಳನ್ನು ಕೋರಿ ಅರ್ಜಿಸಲ್ಲಿಸಿದ್ದಾರೆ.
ಎಲ್ಲಾ ಜಿಲ್ಲೆಗಳಲ್ಲಿ ಒಟ್ಟು 39,782 ಸುಸಜ್ಜಿತ ಪೊಲೀಸ್ ವಸತಿಗೃಹಗಳಿದ್ದು ಈ ಪೈಕಿ 36,111 ವಾಸಕ್ಕೆ ಯೋಗ್ಯವಿದ್ದು, 3671 ವಾಸಕ್ಕೆ ಯೋಗ್ಯವಿರುವುದಿಲ್ಲ. ಅವಶ್ಯಕವಿರುವ 6,314 ಅರ್ಜಿದಾರರಿಗೆ ವಸತಿ ಗೃಹ ಕಲ್ಪಿಸಲು ರಾಜ್ಯಾದ್ಯಂತ 11,000 ವಸತಿ ಗೃಹಗಳನ್ನು 1818 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡಲು ಕ್ರಮಕೈಗೊಳ್ಳಲಾಗಿದೆ. 2013-14 ನೇ ಸಾಲಿನಲ್ಲಿ ರೂ 20 ಕೋಟಿ ರು.ಅನುದಾನವನ್ನು ಬಿಡುಗಡೆ ಮಾಡಿದ್ದು, 2014-15 ನೇ ಸಾಲಿನಲ್ಲಿ 79.90 ಕೋಟಿ ರು. ಅನುದಾನ ನಿಗದಿಪಡಿಸಲಾಗಿದೆ ಎಂದು ವಿಧಾನ ಪರಿಷತ್ತಿನಸ್ಸಿ ಸದಸ್ಯ ಪಟೇಲ್ ಶಿವರಾಂ ಪ್ರಶ್ನೆಯೊಂದಕ್ಕೆ ಗೃಹ ಸಚಿವ ಕೆ.ಜೆ. ಜಾರ್ಜ್ ಉತ್ತರಿಸಿದರು.
ಪ್ರತಿ ವರ್ಷ ಹಾಲಿ ಇರುವ ವಸತಿಗೃಹಳಿಗೆ ಮೂಲಸೌಕರ್ಯ ಒದಗಿಸಲು ಸರ್ಕಾರ ಅನುದಾನವನ್ನು ಬಿಡುಗಡೆ ಮಾಡುತ್ತದೆ. ಪ್ರಸಕ್ತ ಸಾಲಿನಲ್ಲಿ 63 ಕೋಟಿ ರು.ಗಳನ್ನು ಮೂಲಭೂತ ಸೌಕರ್ಯಗಳಿಲ್ಲದ ವಸತಿಗೃಹಗಳ ದುರಸ್ತಿ ನವೀಕರಣ ಮಾಡಲು ಬಿಡುಗಡೆ ಮಾಡಲಾಗಿದೆ.
ಇದರಲ್ಲಿ ಈಗಾಗಲೇ ಘಟಕಗಳಿಗೆ 36,07,72,573 ರು. ದುರಸ್ತಿ ಕಾಮಗಾರಿಗಾಗಿ ಮಂಜೂರಾತಿ ಮಾಡಲಾಗಿದೆ ಎಂದು ಸಚಿವರು ಉತ್ತರಿಸಿದರು.