ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಸ್ ನಿಲ್ದಾಣ ಇಲ್ಲದೆ ಹಾರನಹಳ್ಳಿ ಪ್ರಯಾಣಿಕರ ಪರದಾಟ

Rashmi Kasaragodu
Updated On : 30 Jul 2014, 10:49 am

ಹಾರನಹಳ್ಳಿ: ಹಾರನಹಳ್ಳಿ ಹಿಂದೆ ತಾಲೂಕು ಕೇಂದ್ರವಾಗಿದ್ದು, ನಂತರ ಅದು ಅರಸೀಕೆರೆಗೆ ವರ್ಗಾವಣೆ ಗೊಂಡಿದೆ. ಸುಮಾರು 10,000 ಜನಸಂಖ್ಯೆ ಹೊಂದಿರುವ  ಈ ಗ್ರಾಮದಲ್ಲಿ ಇಂದಿಗೂ ಬಸ್ ನಿಲ್ದಾಣವಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ.
ಅರಸೀಕೆರೆಗೆ 8 ಕಿ.ಮೀ, ದೂರವಿರುವ ಹಾರನಹಳ್ಳಿ  ಮೂಲಕ 100ರಿಂದ 150 ಬಸ್ಸು, ಜಾವಗಲ್ ಈ ಮಾರ್ಗದಲ್ಲಿ ಸಂಚಾರ ನಡೆಸುತ್ತಿವೆ. ಹಾರನಹಳ್ಳಿ ಸುತ್ತಮುತ್ತಲ ಗ್ರಾಮಗಳಾದ ಯರೆಹಳ್ಳಿ, ಗುತ್ತಿನಕೆರೆ, ಮಾಕನಹಳ್ಳಿ, ದೊಡ್ಡೇನಹಳ್ಳಿ, ಮಲ್ಲದೇವಿಹಳ್ಳಿ, ಬಿ.ತಂಡ್ಯಾಹಳ್ಳಿಯ ಜನರು ಹಾರನಹಳ್ಳಿಗೇ ಬಂದು ಅರಸೀಕೆರೆ, ಹಾಸನ, ಇತರೆ ಊರುಗಳಿಗೆ ಪ್ರಯಾಣ ಮಾಡುತ್ತಾರೆ.
ಇಲ್ಲಿ ನಿಲ್ಲಬೇಡಿ: ಪ್ರಯಾಣಿಕರಿಗೆ ಅಂಗಡಿ ಮುಂಭಾಗವವೇ ತಂಗುತಾಣ ಮಳೆ ಬಂದ ಸಂದರ್ಭಗಳಲ್ಲಿ ಮಳೆಯಲ್ಲಿಯೇ ನೆನೆಯುವ ಸ್ಥಿತಿ ಒಂದುಕಡೆಯಾದರೆ, ಅಂಗಡಿಮುಂದೆ ಪ್ರಯಾಣಿಕರು ನಿಲ್ಲಬೇಡಿ ವ್ಯಾಪಾರ ಆಗಲ್ಲ ಅಂತ ವರ್ತಕರು ಪ್ರಯಾಣಿಕರ ಮೇಲೆ ಎಗರಾಡುತ್ತಾರೆ. ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯವರು ಹಾರನಹಳ್ಳಿ ಬಸ್ ನಿಲ್ದಾಣ ಮಂಜೂರು ಮಾಡುವಂತೆ ಕೋರಿ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಇಲ್ಲಿಯವರೆಗೆ ಯಾವುದೇ ಗಮನ ಹರಿಸಿಲ್ಲವೆಂದು ಗಾಪಂ ಮಾಜಿ ಅಧ್ಯಕ್ಷ ಹೆಚ್.ಎಸ್.ನಂದೀಶ್ ತಿಳಿಸಿದ್ದಾರೆ.
ಪ್ರಯಾಣಿಕರಿಗೆ ತೊಂದರೆ: ಅರಸೀಕೆರೆ ಯಿಂದ ಜಾವಗಲ್‌ಗೆ ಹೋಗುವ ಬಸ್‌ಗಳು ಹಾರನಹಳ್ಳಿ ಬಸ್ಸು ನಿಲುಗಡೆ ಪ್ರದೇಶಕ್ಕೆ ಬರದೆ ಜಾವಗಲ್, ಅರಸೀಕೆರೆ ಹೋಗುತ್ತಿದೆ. ಇದ್ದರಿಂದ ಪ್ರಯಾಣಿಕರುಗಳಿಗೆ ತೊಂದರೆ ಆಗುತ್ತಿದೆ. ಹಾಸನ ಅರಸೀಕೆರೆಗೆ ಹೋಗುವ ಶಾಲಾ ವಿದ್ಯಾರ್ಥಿಗಳು ಬಸ್ ನಿಲುಗಡೆ ಜಾಗದಲ್ಲಿ ನಿಂತಿದ್ದರು ಬಸ್ಸು ನಿಲಿಸುತ್ತಿಲ್ಲ. ಈ ಬಗ್ಗೆ ಕೆ ಎಸ್‌ಆರ್‌ಟಿಸಿ ಇಲಾಖೆ ಅಧಿಕಾರಿಗಳು ಗಮನಹರಿಸಬೇಕಾಗಿದೆ.
ಬಸ್ ಪ್ರಯಾಣ ದರ ಹೆಚ್ಚಿಸುವ ಸಂಸ್ಧೆಯವರು ಗ್ರಾಮಾಂತರ ಪ್ರದೇಶದಲ್ಲಿ ಪ್ರಯಾಣಿಕರಿಗೆ ತಂಗುತಾಣ, ಬಸ್ ನಿಲ್ದಾಣ ಮಾಡಲು ಮುಂದಾಗದೆ ಕೈಕಟ್ಟಿ ಕುಳಿತ್ತಿದ್ದಾರೆ. ಅರಸೀಕೆರೆ ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕರು ಹಾರನಹಳ್ಳಿಯಲ್ಲಿ ಟಿಸಿ ಪಾಯಿಂಟ್ ಮಂಜೂರುಮಾಡಿ ಅಧಿಕಾರಿಯನ್ನು ನಿಯೋಜಿಸುವಂತೆ  ಗ್ರಾಮಸ್ಥರು, ವಿದ್ಯಾರ್ಥಿಗಳ ಒತ್ತಾಯಿಸಿದ್ದಾರೆ.


ಜಿಪಂ ಕ್ರಮ ಕೈಗೊಳ್ಳಲಿ
ಬರೀ ಚುನಾವಣೆ ಸಂದರ್ಭದಲ್ಲಿ ಮಾತ್ರ ಮತ ಕೇಳುವ ಶಾಸಕರು, ತಾಪಂ, ಜಿಪಂ. ಸದಸ್ಯರು ಹಾರನಹಳ್ಳಿ ಪ್ರಾಧಮಿಕ ಆಸ್ಪತ್ರೇ ಮುಂಭಾಗ ಜಿಪಂ ವತಿಯಿಂದ ತಂಗುತಾಣ ನಿರ್ಮಿಸಲು ಕ್ರಮ ಕೈಗೊಳ್ಳಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement