ಶಿಕ್ಷಕರ ಸಂಘಕ್ಕೆ ಆಯ್ಕೆ
ಆಲೂರು: ಇತ್ತೀಚೆಗೆ ನಡೆದ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಚುನಾವಣೆಯಲ್ಲಿ ದೊಡ್ಡ ಕಣಗಾಲು ಪ್ರೌಢಶಾಲೆಯ ಸಹ ಶಿಕ್ಷಕ ನಾಗೇಂದ್ರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಶಿಕ್ಷಣ ಸಂಯೋಜಕ ಬಸವ ರಾಜು (ಬಿ.ಇ.ಒ.) ಕಚೇರಿ ಆಲೂರು ಇವರು ಆಯ್ಕೆಯಾಗಿದ್ದು, ರಾಜ್ಯ ಪರಿಷತ್ ಪ್ರತಿನಿಧಿಯಾಗಿ ಸಹ ಶಿಕ್ಷಕ ವಾಸುದೇವ್ ಡಿ. (ಅಂಬೇಡ್ಕರ್ ಪ್ರೌಢ ಶಾಲೆ ಮಗ್ಗೆ), ಕಾರ್ಯದರ್ಶಿಯಾಗಿ ಅಮೃತ್ ರಾಜ್ ಸಹ ಶಿಕ್ಷಕ ಹಂಚೂರು ಪ್ರೌಢ ಶಾಲೆ), ಸಹ ಕಾರ್ಯದರ್ಶಿಯಾಗಿ ಜಿ.ಆರ್. ಉಮೇಶ್ ಸಹ ಶಿಕ್ಷಕ ತಿಪ್ಪನಹಳ್ಳಿ ಪ್ರೌಢಶಾಲೆ), ಖಜಾಂಚಿಯಾಗಿ ಸತ್ಯಪ್ಪ ನಿಂಬರಗಿ (ಸಹಶಿಕ್ಷಕ ಕುಂದೂರು ಪ್ರೌಢಶಾಲೆ) ಅವರು ಆಯ್ಕೆಯಾಗಿದ್ದಾರೆ.