ಕುಶಾಲನಗರದಲ್ಲಿ ಭೂಕುಸಿತ: ಎಸಿ ಪರಿಶೀಲನೆ
ಸಕಲೇಶಪುರ: ಭೂಕುಸಿತದ ಭಯ ಎದುರಿಸುತ್ತಿರುವ 5 ಕುಟುಂಬಗಳನ್ನು ಶೀಘ್ರವೇ ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಉಪವಿಭಾಗಾಧಿಕಾರಿ ಮಧುಕೇಶ್ವರ ಹೇಳಿದ್ದಾರೆ.
ಗುರುವಾರ ಪಟ್ಟಣದ ಕುಶಾಲನಗರ ಬಡಾವಣೆಯ ಭೂಕುಸಿತ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿ, ಬುಧವಾರ ಸುರಿದ ಮಳೆಗೆ ಬಡಾವಣೆಯ ಎರಡು ಮನೆಗಳು ಜಖಂಗೊಂಡಿದೆ. ಇನ್ನೂ 4 ಮನೆಗಳು ಭೂಕುಸಿತದ ಭಯ ಎದುರಿಸುತ್ತಿರುವುದರಿಂದ ಶೀಘ್ರವೇ ಈ ಕುಟುಂಬಗಳನ್ನು ಪುರಸಭೆ ಅಧಿಕಾರಿಗಳು ಸ್ಥಳಾಂತರಿಸಬೇಕು. ಅಲ್ಲದೆ ಹೆಚ್ಚಿನ ಹಾನಿಯಾಗದಂತೆ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು ಎಂದು ಆದೇಶಿಸಿದರು.
ತಹಸೀಲ್ದಾರ್ ಪಾರ್ವತಿ, ತಾಲೂಕು ಶಿರಸ್ತೇದಾರ್ ರಮೇಶ್, ಪುರಸಭೆ ಸದಸ್ಯ ಸಯ್ಯದ್ ಇದ್ದರು.