ಜ್ಞಾನ ಮಂದಾರ ಪ್ರಶಸ್ತಿ
ಹಾಸನ: ಚನ್ನರಾಯಪಟ್ಟಣ ನಾಟ್ಯಭೈರವಿ ಟ್ರಸ್ಟ್ ಆಶ್ರಯದಲ್ಲಿ ನಡೆಯಲಿರುವ ಶ್ರಾವಣ ಸಂಜೆ ಸಂಸ್ಕೃತಿ ವೈಭವ 2014 ರ ಸಮಾರೋಪ ಸಮಾರಂಭದಲ್ಲಿ 2014-15ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.99ರಷ್ಟು ಅಂಕ ಪಡೆದ ಹಾಸನ ಜಿಲ್ಲೆಯ 5 ವಿದ್ಯಾರ್ಥಿಗಳಿಗೆ ರಜತ ಪದಕ ಮತ್ತು ಜ್ಞಾನ ಮಂದಾರ ಪ್ರಶಸ್ತಿ ನೀಡಲಾಗುವುದು. ಆ. 15 ರೊಳಗೆ ತಮ್ಮ 2 ಭಾವಚಿತ್ರ ಹಾಗೂ ಸ್ವ ವಿಳಾಸದೊಂದಿಗೆ ಅಂಕಪಟ್ಟಿ ನಕಲನ್ನು ಅಧ್ಯಕ್ಷರು, ಶ್ರೀ ನಾಟ್ಯಭೈರವಿ ಟ್ರಸ್ಸ್ಟಿ ಗಾಂಧಿ ಸರ್ಕಲ್, ಚನ್ನರಾಯಪಟ್ಟಣ. ಮೊ-9964566885 ಸಂಪರ್ಕಿಸಬಹುದು.