ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಳೆಯಿಂದ ತಾಲೂಕಲ್ಲಿ ಅಪಾರ ನಷ್ಟ: ಎಚ್.ಕೆ.ಕುಮಾರಸ್ವಾಮಿ

Rashmi Kasaragodu
Updated On : 1 Aug 2014, 12:51 pm

ಆಲೂರು: ಆಲೂರು ತಾಲ್ಲೂಕಿನಾದ್ಯಂತ ಕಳೆದ ಹಲವು ಭಾಗಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಪಂಚಾಯ್ತಿ, ಕೃಷಿ, ತೋಟಗಾರಿಕೆ, ಸೆಸ್ಕ್ ಇಲಾಖೆಗಳ ಅಧಿಕಾರಿಗಳೊಂದಿಗೆ ಮಳೆ ಹಾನಿ ಬಗ್ಗೆ ನಡದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಮಳೆಯಿಂದಾಗಿ ಉಂಟಾಗಿರುವ ಹಾನಿ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ನಷ್ಟದ ವರದಿ (ಅಂದಾಜು ಪಟ್ಟಿಯನ್ನು) ತಯಾರಿಸಿ ಯಾವ ಪ್ರದೇಶದಲ್ಲಿ ಯಾವ ಯಾವ ಬೆಳೆಯು ನಷ್ಟವಾಗಿದೆ ಎಂದು ವರದಿ ಸಲ್ಲಿಸಲು ಶಾಸಕರು ಸೂಚಿಸಿದರು.
ಆಲೂರು ತಾಲೂಕಿನಲ್ಲಿ ರೈತರಿಗೆ ಸಕಾಲಕ್ಕೆ ಬಿತ್ತನೆ ಬೀಜ, ರಸಗೊಬ್ಬರ ಪರಿಕರಗಳನ್ನು ಸಕಾಲದಲ್ಲಿ ಒದಗಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ಕಸಬಾ, ಕುಂದೂರು, ಪಾಳ್ಯ, ಕೆ.ಹೊಸಕೋಟೆ ಬಿತ್ತನೆ ಮಾಡಿರುವ ಭತ್ತ, ಜೋಳ, ಶುಂಠಿ ಬೆಳಗಳಲ್ಲಿ ಬಂದಿರುವ ರೋಗಗಳಿಗೆ ಕೃಷಿ, ತೋಟಗಾರಿಕೆ ಇಲಾಖೆಯವರು ವರದಿ ಮಾಡಿರುತ್ತಾರೆ. ರೋಗಗಳ ನಿಯಂತ್ರಣ ಬಗ್ಗೆ ಸೂಕ್ತ ಕ್ರಮ ವಹಿಸಲು ಎಂದು ಹೇಳಿದರು.
ಕಾಫಿ ಹಾಗೂ ಮೆಣಸು ಇತರೆ ದ್ವಿದಳ ಧಾನ್ಯ ಬೆಳೆಗಳು ಸೇರಿದಂತೆ ಶೀತ ಭಾದೆಯಿಂದ ಬೆಳವಣಿಗೆ ಕುಂಠಿತವಾಗಿದೆ. ಇದರಿಂದ ಬೆಳೆಗಾರರು ನಷ್ಟ ಸಂಭವಿಸಿರುವ ಕಾರಣ ಈ ಬಗ್ಗೆ ಹೆಚ್ಚಿನ ಹಣ ಬಿಡುಗಡೆ ಮಾಡುವಂತೆ ಸದನದಲ್ಲಿ ಒತ್ತಯ ವ್ಯಕ್ತಪಡಿಸಿದರು, ರಸ್ತೆ ಹಾಗೂ ಒಳಚರಂಡಿಗಳ ಬಗ್ಗೆ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರು.
ಸಭೆಯಲ್ಲಿ ತಹಸೀಲ್ದಾರ್ ಮಹದೇವಯ್ಯ, ತೋಟಗಾರಿಕೆ ಇಲಾಖೆಯ ಸಹಾಯ ನಿರ್ದೇಶಕಿ ವಿಜಯಚಿತ್ರ, ಜಲಾನಯನ ಇಲಾಖೆಯ ಅಧಿಕಾರಿ ಸುರೇಶ್, ವಾಟೇಹೊಳೆ ಜಲಾಶಯದ ಸಹಾಯಕ ಅಭಿಯಂತರ ನಟರಾಜ್ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement