ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಕ್ರಮ ಉಡ ಮಾರಾಟ ಬಂಧನ

Rashmi Kasaragodu
Updated On : 4 Jun 2014, 1:11 am

ಹೊಳೆನರಸೀಪುರ: ಕಾಡು ಜಾತಿಗೆ ಸೇರಿದ ಮಾನಿಟರ್ ಲೇಜರ್ಡ್(ಉಡ)ವನ್ನು ಹಿಡಿದು ಪಟ್ಟಣದಲ್ಲಿ ಆಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಇಲ್ಲಿನ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದು ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ಬಂಧಿಸಿರುವ ಪ್ರಕರಣ ವರದಿಯಾಗಿದೆ.
ಅಪರೂಪದ ವನ್ಯಜೀವಿಯಾದ ಉಡವನ್ನು ಹಿಡಿದು ಪಟ್ಟಣದಲ್ಲಿ ಕದ್ದುಮುಚ್ಚಿ ಆಕ್ರಮವಾಗಿ ಮಾರಾಟ ಮಾಡುತ್ತಿರುವ ವರ್ತಮಾನದ ಮೇರೆಗೆ ಇಲ್ಲಿನ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಕೆ.ಆರ್.ಪೇಟೆ ತಾಲೂಕಿಗೆ ಸೇರಿದ ಕೃಷ್ಣಾಪುರ ಗ್ರಾಮದ ನಾಗರಾಜು ಹಾಗೂ ಲಕ್ಕಯ್ಯ ಎಂಬುವರನ್ನು ಬಂಧಿಸಿದ್ದಾರೆ. ಇವರನ್ನು ವನ್ಯಜೀವಿ ಸಂರಕ್ಷಣಾ ಕಾಯಿದೆ ಸೆಕ್ಷನ್ 9, 48, 48(ಎ), 61ರ ಅಡಿ ದೂರು ದಾಖಲಿಸಿಕೊಂಡು ಆರೋಪಿಗಳನ್ನು ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿಗಳನ್ನು ಬಂಧಿಸುವಲ್ಲಿ ಇಲ್ಲಿನ ಪೊಲೀಸ್ ಉಪ-ಅಧೀಕ್ಷಕ ಎಎಸ್ಪಿ ವಿನಾಯಕ ಪಾಟೀಲ್, ವಲಯ ಅರಣ್ಯಾಧಿಕಾರಿ ಪಿ.ಸಿ.ರವೀಂದ್ರ ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement