ಜಿಲ್ಲೆಯ ಹಲವೆಡೆ ವಿದ್ಯುತ್ ವ್ಯತ್ಯಯ
ಹಾಸನ: ವಿದ್ಯುತ್ ನಿರ್ವಹಣಾ ಕೇಂದ್ರದಲ್ಲಿ ಜೂ. 4 ರಂದು ತುರ್ತು ನಿರ್ವಹಣಾ ಕೆಲಸಗಳನ್ನು ಮಾಡಬೇಕಾಗಿರುವುದರಿಂಂದ ಅಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ ಜಿಲ್ಲೆಯ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಬೇಲೂರು ಅರಕಲಗೂಡು, ಮೂಡಿಗೆರೆ ತಾಲೂಕಿನಾದ್ಯಂತ, ಹಾಸನ ನಗರದ ಹೇಮಾವತಿ ನಗರ, ಶಾಂತಿನಗರ, ವಿದ್ಯಾನಗರ ಹಾಗೂ ಮದ್ಯಾಹ್ನ 12 ರಿಂದ 2 ಗಂಟೆವರೆಗೆ ಹಾಸನ ನಗರದ ತಣ್ಣೀರುಹಳ್ಳ, ಹಳೆ ಬಸ್ ನಿಲ್ದಾಣ, ಸಂತೆಪೇಟೆ, ಆಲೂರು, ಸಕಲೇಶಪುರ ಹಾಗೂ ಶನಿವಾರ ಸಂತೆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಿದ್ಯುತ್ ಸ್ಥಾವರಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ನಗರ ಪ್ರದೇಶದಲ್ಲ್ಲೂ ವಿದ್ಯುತ್ ಕಡಿತ
ಹಾಸನ: ರಾಮೇಶ್ವರನಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಹಾಲಿ ಇರುವ ಬ್ರೇಕರ್ಗಳು ಹಾಳಾಗಿದ್ದು, ಅವುಗಳನ್ನು ಬದಲಾಯಿಸಿ ಹೊಸ ಬ್ರೇಕರ್ಗಳನ್ನು ಅಳವಡಿಸಬೇಕಾಗಿರುವುದರಿಂದ ಜೂನ್ 4 ರಂದು ಬೆಳಗ್ಗೆ 9 ರಿಂದ ಸಂಜೆ 7 ರವರೆಗೆ ನಿಗದಿಪಡಿಸಿದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸತ್ಯಮಂಗಲ, ದೊಡ್ಡಪುರ, ಬೂವನಹಳ್ಳಿ, ಕೆ.ಆರ್.ಪುರಂ, ಬಿ.ಎಂ ರಸ್ತೆ, ಉದಯಗಿರಿ, ಶಂಕರಿ ಪುರಂ, ಆಡುವಳ್ಳಿ, ರೈಲ್ವೆ ನಿಲ್ದಾಣ, ಆರ್.ಟಿ.ಒ ಕಚೇರಿ ಪ್ರದೇಶ, ರಾಜಘಟ್ಟ, ಸುತ್ತಮುತ್ತಲ ಪ್ರದೇಶಗಳಲ್ಲಿ ಅನಿಯಮಿತವಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ, ಸಾರ್ವಜನಿಕರು ಸಹಕರಿಸಬೇಕೆಂದು ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತದ ಕಾರ್ಯಪಾಲಕ ಇಂಜಿನಿಯರ್ ಕೋರಿದ್ದಾರೆ.
ವಸತಿ ಶಾಲೆಗೆ ಅರ್ಜಿ ಆಹ್ವಾನ
ಹಾಸನ: ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಮೊರಾರ್ಜಿ ದೇಸಾಯಿ-ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳಲ್ಲಿ 1ನೇ ಕೌನ್ಸೆಲಿಂಗ್ ನಂತರ ಉಳಿಕೆಯಾಗಿರುವ ಸ್ಥಾನಗಳಿಗೆ 6ನೇ ತರಗತಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಪ್ರವರ್ಗವಾರು ರ್ಯಾಂಕಿಂಗ್ ಆಧಾರದ ಮೇಲೆ ಜೂನ್ 6 ರಂದು ಬೆಳಗ್ಗೆ 10ಕ್ಕೆ 2ನೇ ಸುತ್ತಿನ ಕೌನ್ಸೆಲಿಂಗ್ನ್ನು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ ಕಚೇರಿ, ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದೆ. ಪ್ರವರ್ಗವಾರು ಬಾಲಕರು, ಬಾಲಕಿಯರು ಈ ಮುಂದಿನ ವಿವರದ ರ್ಯಾಂಕ್ ವ್ಯಾಪ್ತಿಗೆ ಒಳಪಡುವವರು ಕೌನ್ಸೆಲಿಂಗ್ಗೆ ಹಾಜರಾಗಲು ಕೋರಿದೆ. ಪ್ರವರ್ಗ-1 ಬಾಲಕಿಯರು 3647, ಬಾಲಕರು 2213, 2ಎ ಬಾಲಕಿಯರು 2580, ಬಾಲಕರು 1309, ಪ.ಜಾತಿ ಬಾಲಕಿಯರು 2722, ಬಾಲಕರು 1852, 3ಎ ಬಾಲಕಿಯರು 269, ಬಾಲಕರು 341, 3ಬಿ ಬಾಲಕಿಯರು 621, ಬಾಲಕರು 549. ಕೌನ್ಸೆಲಿಂಗ್ಗೆ ಹಾಜರಾಗಲು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಪುರುಷೋತ್ತಮ ಕೋರಿದ್ದಾರೆ.