ದುಶ್ಚಟ, ಮೌಢ್ಯಗಳಿಂದ ವಿದ್ಯಾರ್ಥಿಗಳೇ ದೂರವಿರಿ
ಹಾಸನ: ಕೆಟ್ಟ ವಿಚಾರ, ದುಶ್ಚಟಗಳು ಹಾಗೂ ಮೌಢ್ಯಗಳು ಇವೆಲ್ಲಾ ಪಿಯು ಹಂತದಲ್ಲಿ ಹೆಚ್ಚು ಸೆಳೆಯುತ್ತದೆ. ಇವುಗಳಿಂದ ವಿದ್ಯಾರ್ಥಿಗಳು ದೂರ ಇದ್ದು ವಿದ್ಯಾಭ್ಯಾಸಕ್ಕೆ ಹೆಚ್ಚು ಆಸಕ್ತಿ ವಹಿಸುವಂತೆ ಬೆಂಗಳೂರು ಸದ್ವಿದ್ಯಾ ಪಿಯು ಕಾಲೇಜ್ ಪ್ರಾಂಶುಪಾಲ ಗೋವಿಂದೇಗೌಡ ಹೇಳಿದರು.
ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಬ್ರಿಲಿಯಂಟ್ ಪಿಯು ಕಾಲೇಜ್ ಹಾಗೂ ಆದರ್ಶ ಎಜುಕೇಶನ್ ಸೊಸೈಟಿ ಆಶ್ರಯದಲ್ಲಿ ಸೋಮವಾರ ನಡೆದ ಪಿಯು ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ತಿಳಿವಳಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಿಯು ಎಂಬುದು ವಿದ್ಯಾರ್ಥಿ ಜೀವನದ ಅಮೂಲ್ಯವಾದ ಘಟ್ಟ. ಸಕರಾತ್ಮಕವಾಗಿ ಮಕ್ಕಳು ಎದುರಿಸಬೇಕು ಎಂದರು.
ಮಕ್ಕಳ ಸಾಮರ್ಥ್ಯ ಅರಿಯದೆ ಪೋಷಕರು ಅವರ ಮೇಲೆ ಹೆಚ್ಚು ಹೊರೆ ಹಾಕಬಾರದು. ಬದುಕಿನಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಸಲಹೆ ನೀಡಿದರು.
ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿದರು. ಇದೆ ವೇಳೆ ವಿಜಯ ಆಂಗ್ಲ ಮಾಧ್ಯಮ ಶಾಲೆ ಆಡಳಿತಾಧಿಕಾರಿ ತಾರಾ ಸುಬ್ಬಸ್ವಾಮಿ, ಆದರ್ಶ ಸೊಸೈಟಿ ಅಧ್ಯಕ್ಷರಾದ ಕೆ.ಎಮ್. ಹೀರೆಗೌಡ, ಬೇಸ್ ಅಕಾಡೆಮಿಯ ನಾಗರಾಜ್ ಇತರರು ಇದ್ದರು.