ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ದೇವಾಲಯ ನಿರ್ಮಾಣಕ್ಕೆ ನಿರ್ಣಯ

Rashmi Kasaragodu
Updated On : 4 Jun 2014, 1:10 am

ಕನ್ನಡಪ್ರಭ ವಾರ್ತೆ    ಹೊಳೆನರಸೀಪುರ    ಜೂ.3
ಇಲ್ಲಿನ ಆರ್ಯವೈಶ್ಯ ಜನಾಂಗದ ಎಲ್ಲರ ಸಹಕಾರದೊಂದಿಗೆ ಆರ್ಯವೈಶ್ಯ ಮಂಡಳಿಯ ವತಿಯಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿನ ಶ್ರೀ ಕನ್ನಿಕಾಪರಮೇಶ್ವರಿ ದೇವಾಲಯದ ಗರ್ಭಗುಡಿಯನ್ನು ತೆರವುಗೊಳಿಸಿ ಅದೇ ಸ್ಥಳದಲ್ಲಿ ಸುಮಾರು ಒಂದೂವರೆ ಕೋಟಿ ವೆಚ್ಚದಲ್ಲಿ ನೂತನ ಗರ್ಭಗುಡಿ ಹಾಗೂ ಕಟ್ಟಡ ನಿರ್ಮಾಣಕ್ಕೆ ದೇವಾಲಯದ ಆಡಳಿತ ಮಂಡಳಿ ಸಭೆ ನಡೆಸಿ ತೀರ್ಮಾನಿಸಿತು.
ಪಟ್ಟಣದಲ್ಲಿನ ವಾಸವಿ ಮಹಲ್‌ನಲ್ಲಿ  ಮಂಗಳವಾರ ನಡೆದ ಆರ್ಯವೈಶ್ಯ ಸಮಾಜದ ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷ ಕೆ.ಎನ್.ಅರುಣ್ ಅವರ ಅಧ್ಯಕ್ಷತೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಯಿತು. ಪ್ರಸ್ತುತ ಶ್ರೀ ಕನ್ನಿಕಾಪರಮೇಶ್ವರಿ ಅಮ್ಮನವರ ನೂತನ ವಿಗ್ರಹವು ಪ್ರತಿಷ್ಠಾಪನೆಗೊಂಡು ಇದೇ ತಿಂಗಳು 25ಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿದ್ದು, ಇದರ ವಾರ್ಷಿಕೋತ್ಸವ ಸಮಾರಂಭ ಜೂ.25ರಂದು ಆಯೋಜಿಸಿದೆ.
ಎರಡು ದಿನಗಳ ಕಾಲ ವಾರ್ಷಿಕ ಸಮಾರಂಭದ ಪ್ರಯುಕ್ತ ವಿಶೇಷ ಪೂಜೆ ಹೋಮ ಹವನಗಳು ನಡೆಯಲಿವೆ. ನಂತರ ಅಮ್ಮನವರ ವಿಗ್ರಹವನ್ನು ಕಳಾಕರ್ಷಣೆ ಮೂಲಕ ಬೇರೆಡೆಗೆ ತಾತ್ಕಾಲಿಕವಾಗಿ ಪ್ರತಿಷ್ಠಾಪಿಸಿ ನಂತರ ಹಾಲಿ ಇರುವ ಗರ್ಭಗುಡಿಯಲ್ಲಿನ ದೇವರ ವಿಗ್ರಹಗಳನ್ನು ಬೇರೆಡೆಗೆ ಸ್ಥಳಾಂತರಿಸಿದ ನಂತರ ಹಳೇ ಗರ್ಭಗುಡಿ ತೆರವುಗೊಳಿಸಿ ನೂತನ ಗರ್ಭಗುಡಿ ನಿರ್ಮಾಣದ ಕೆಲಸವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅಧ್ಯಕ್ಷ ಅರುಣ್ ಸಭೆಯಲ್ಲಿ ಮಾಹಿತಿ ನೀಡಿದರು.
ನೂತನ ಗರ್ಭಗುಡಿಯನ್ನು ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಿಸಲು ಯೋಜನೆಯ ನೀಲ ನಕ್ಷೆ ಸಿದ್ಧವಾಗಿರುವುದನ್ನು ಸಭೆಯಲ್ಲಿ ಸರ್ವಸದಸ್ಯರಿಗೆ ಪ್ರದರ್ಶಿಸಿದ ಅವರು, ಸುಮಾರು 1.5 ಕೋಟಿ ರು. ವೆಚ್ಚದ ಕಾಮಗಾರಿಗೆ ಪಟ್ಟಣದ ಆರ್ಯವೈಶ್ಯ ಸಮಾಜದ ಗಣ್ಯರು ಹಾಗೂ ಸಮಾಜದ ಎಲ್ಲರಿಂದ ದೇಣಿಗೆ ರೂಪದಲ್ಲಿ ಸಂಗ್ರಹಿಸಿ ಗರ್ಭಗುಡಿ ನಿರ್ಮಾಣವನ್ನು ಪೂರ್ಣಗೊಳಿಸಲು ತಿರ್ಮಾನಿಸಲಾಯಿತು.
ಸರ್ವಸದಸ್ಯರ ಸಭೆಯಲ್ಲಿ ಆರ್ಯವೈಶ್ಯ ಸಮಾಜದ ಎಲ್ಲರೂ ಭಾಗವಹಿಸಿ ದೇವಾಲಯ ನಿರ್ಮಾಣಕ್ಕೆ ಬೇಕಾದ  ಸಲಹೆ ನೀಡಿದರು. ಶತಮಾನದಷ್ಟು ಹಳೆಯದಾಗಿದ್ದ ಶ್ರೀ ಕನ್ನಿಕಾ ಪರಮೇಶ್ವರಿ ಅಮ್ಮನವರ ವಿಗ್ರಹವು ಅ.7 2012 ಆಕಸ್ಮಿಕವಾಗಿ ಭಗ್ನಗೊಂಡಿತ್ತು. ಈ ಹಿನ್ನಲೆಯಲ್ಲಿ ಸುಮಾರು ಒಂಬತ್ತು ತಿಂಗಳ ನಂತರ ಆರ್ಯವೈಶ್ಯ ಸಮಾಜದ ಎಲ್ಲರು ಒಗ್ಗೂಡಿ ನೂತನ ಕನ್ನಿಕಾಪರಮೇಶ್ವರಿ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದರು.
ಸರ್ವ ಸದಸ್ಯರ ಸಭೆಯಲ್ಲಿ ಉಪಾದ್ಯಕ್ಷ ಕೆ.ಕೆ.ಮುರುಳಿಧರಗುಪ್ತ, ಕಾರ್ಯದರ್ಶಿ ಜಿ.ಎಸ್.ರಂಗನಾಥಶೆಟ್ಟಿ ಹಾಗೂ ಪಟ್ಟಣದ ಆರ್ಯವೈಶ್ಯ ಸಮಾಜದ ಹಿರಿಯರು ಸೇರಿದಂತೆ ಬಹಳಷ್ಟು ಮಂದಿ ಭಾಗವಹಿಸಿದ್ದರು.



ಮುಖ್ಯಮಂತ್ರಿಯಾಗಿದ್ದ ಜಗಧೀಶ್ ಶೆಟ್ಟರ್, ರಾಜ್ಯದಲ್ಲಿನ ಬಹುತೇಕ ದೇವಾಲಯಗಳಿಗೆ ಅನುದಾನ ನೀಡುವುದಾಗಿ ಘೋಷಿಸಿದ್ದರು. ಆದರೆ, ಕಾಲಾನಂತರದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು, ಆ ಹೇಳಿಕೆಗಳು ಭರವಸೆಯಾಗಿಯೇ ಉಳಿಯಿತು. ಇದೀಗ ರಾಜ್ಯ ಸರ್ಕಾರ ನೀಡುವ ಒಂದು ಕೋಟಿ ಹಣವನ್ನು ನೆಚ್ಚಿಕೊಳ್ಳದೆ ಸ್ವತಂತ್ರವಾಗಿ ಸಮಾಜದ ಎಲ್ಲರ ಸಹಕಾರದಿಂದ ದೇಣಿಗೆ ಸಂಗ್ರಹಿಸುವ ಮೂಲಕ ಹೊಸ ಕಟ್ಟಡ ಹಾಗೂ ಗರ್ಭಗುಡಿ ನಿರ್ಮಾಣಕ್ಕೆ ಮುಂದಾಗಲಾಗಿದೆ.
  ಕೆ.ಎನ್.ಅರುಣ್,
ಆರ್ಯವೈಶ್ಯ ಸಮಾಜದ ಅಧ್ಯಕ್ಷ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement