ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಭೂಚೇತನ ಯೋಜನೆಯಡಿ ಸಾಂಸ್ಥಿಕ ತರಬೇತಿ

Rashmi Kasaragodu
Updated On : 4 Jun 2014, 1:10 am

ಹಾಸನ: ಕೃಷಿ ಇಲಾಖೆ ಹಾಗೂ ಕಂದಲಿಯ ಕೃಷಿ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ಭೂಚೇತನ ಯೋಜನೆಯಡಿ ರೈತ ಅನುವುಗಾರರಿಗೆ 5 ದಿನಗಳ ತರಬೇತಿ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಜಂಟಿ ಕೃಷಿ ನಿರ್ದೇಶಕ ಬಿ. ಶಿವರಾಜು ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿ, ವೈಜ್ಞಾನಿಕ ರೀತಿಯಲ್ಲಿ ಬೇಸಾಯ ಪದ್ಧತಿಯನ್ನು ರೈತರ ತಾಕಿನಲ್ಲಿ ಅಳವಡಿಸುವುದು ಭೂಚೇತನ ಕಾರ್ಯಕ್ರಮದ ಮುಖ್ಯ ಅಂಶವಾಗಿದೆ. ಆದ್ದರಿಂದ  ತರಬೇತಿಯಲ್ಲಿ ಭಾಗವಹಿಸಿರುವ ಅನುವುಗಾರಾರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಿಂದ ವೈಜ್ಞಾನಿಕ ಬೇಸಾಯ ಕ್ರಮಗಳ ಮಾಹಿತಿ ಪಡೆದು ರೈತರಿಗೆ ಕಾಲಕ್ಕೆ ಅನುಗುಣವಾಗಿ ನೀಡಬೇಕೆಂದು ತಿಳಿಸಿದರು
ಅಧ್ಯಕ್ಷತೆ ವಹಿಸಿದ್ದ ಕಂದಲಿ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ. ಬಿ.ಎಸ್. ಬಸವರಾಜು ಮಾತನಾಡಿ, ಭೂಚೇತನ ಯೋಜನೆಯಡಿ ಆಯ್ಕೆಯಾಗಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲ ರೈತ ಅನುವುಗಾರರು ತರಬೇತಿ ಕಾರ್ಯಕ್ರಮ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಎಸ್. ಚನ್ನಕೇಶವ, ಡಾ. ಟಿ.ಎಸ್.ಮಂಜುನಾಥಸ್ವಾಮಿ, ಡಾ. ಜಿ.ಎಸ್. ಕೃಷ್ಣಾರೆಡ್ಡಿ, ಡಾ. ಕೆ.ಜೆ.ಕಾಂತರಾಜು ಹಾಗೂ ಡಾ.ಎಚ್.ಕೆ. ಪಂಕಜಾ ಇದ್ದರು. ಕಾರ್ಯಕ್ರಮದಲ್ಲಿ ಅರಸೀಕೆರೆ ಮತ್ತು ಆಲೂರು ತಾಲೂಕಿನ ರೈತ ಮತ್ತು ರೈತ ಮಹಿಳಾ ಅನುವುಗಾರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement