ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಸ್ತೆ ವಿಸ್ತರಣೆಗೆ ಮರಗಳ ತೆರವು

Rashmi Kasaragodu
Updated On : 4 Jun 2014, 1:09 am

ಆಲೂರು: ಕೊನೆಗೂ ಪಟ್ಟಣದ ಮುಖ್ಯ ರಸ್ತೆಯ ಕಾಮಗಾರಿ ಆರಂಭವಾಗುವ ಸೂಚನೆಗಳು ಕಾಣುತ್ತಿವೆ. ಕಳೆದೊಂದು ವರ್ಷದಿಂದ ನನೆಗುದಿಗೆ ಬಿದ್ದಿದ್ದ ಗುದ್ದಲಿ ಪೂಜೆ, ಸರ್ವೇ ಎಂದು ಮುಂದೂಡುತ್ತಲೇ ಬಂದಿದ್ದ ಮುಖ್ಯ ರಸ್ತೆಗೆ ಡಾಂಬರು ಕಾಣುವ ಭಾಗ್ಯ ಬಂದಿದೆ.
ಪಟ್ಟಣದಲ್ಲಿಂದು ರಸ್ತೆಯ ಇಕ್ಕೆಲಗಳಲ್ಲಿದ್ದ ಒಟ್ಟು 54 ಮರಗಳಲ್ಲಿ 26 ಮರಗಳನ್ನು ಹರಾಜು ಹಾಕಲಾಗಿದ್ದು,  ಬಿಡ್‌ದಾರರು 15 ದಿನಗಳೊಳಗಾಗಿ ಮರಗಳನ್ನು ತೆರವುಗೊಳಿಸಬೇಕಾಗಿದೆ. ಉಳಿದ 26 ಮರಗಳಿಗೆ ಸರ್ಕಾರ ದ ಟೆಂಡರ್‌ಗಿಂತ ಕಡಿಮೆ ಮೊತ್ತಕ್ಕೆ ಬಿಡ್ ಆದ ಕಾರಣ ಮತ್ತೆ ಮುಂದಿನವಾರ ಹರಾಜು ಪ್ರಕ್ರಿಯೆ ನಡೆಯಲಿದೆ.
ಮರಗಳನ್ನು ಕಡಿಯುವ ಮುಂಚೆ ವಿದ್ಯುತ್ ಕಂಬಗಳನ್ನು ತೆರವ ುಗೊಳಿಸಬೇಕಿದ್ದು, ಈಗಾಗನೇ ಪಟ್ಟಣ ಪಂಚಾಯಿತಿನವರು ಚೆಸ್ಕಾಂಗೆ ಈ ಬಗ್ಗೆ ಸೂಚನೆ ನೀಡಿದು,್ದ ವಿದ್ಯುತ್ ಕಂಬಗಳ ತೆರವು ಕಾರ್ಯ ಮುಗಿದೊಡನೆ ಮರಗಳನ್ನು ತೆರವುಗೊಳಿಸಿ ರಸ್ತೆ ಕಾರ್ಯ ಆರಂಭವಾಗಲಿದೆ.  ಪಟ್ಟಣದ ನಾನಾ ಬಡಾವಣೆಗಳಲ್ಲಿ ನಡೆಯುತ್ತಿರುವ ಡಾಂಬರ್ ಕಾಮಗಾರಿ ಕಳಪೆಮಟ್ಟದ್ದಾಗಿದೆ ಎಂದು ಸ್ಥಳೀಯರು ಪ್ರತಿಭಟಿಸಿ ಕಾಮಗಾರಿ ಸ್ಥಗಿತಗೊಳಿಸಿದ್ದರು.
ಈಗ ಪಟ್ಟಣದ ಮುಖ್ಯ ರಸ್ತೆಯ ಕಾಮಗಾರಿ ನಡೆಯಬೇಕಿದ್ದು ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣವಾಗುವಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ಪಪಂ ಮೇಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement