ಲೋಕ ಕಲ್ಯಾಣಾರ್ಥವಾಗಿ ಹೋಮ
ಜಾವಗಲ್: ಜಾವಗಲ್ ಬಳಗದವರು ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ನರಸಿಂಹ ಹೋಮ, ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ ಕಾರ್ಯಕ್ರಮವನ್ನು ಬಾಳಗಂಜಿ ರಾಘವೇಂದ್ರ ಆಚಾರ್ಯತ್ವದಲ್ಲಿ ಇತ್ತೀಚೆಗೆ ನೆರವೇರಿಸಿದರು.
ಇದಕ್ಕೂ ಮುನ್ನ ಲಕ್ಷ್ಮೀ ನರಸಿಂಹಸ್ವಾಮಿಗೆ ಪಂಚಾಮೃತ ಅಭಿಷೇಕ, ಅಷ್ಟೋತ್ತರ ಕಾರ್ಯಕ್ರಮ ನಡೆಯಿತು. ನಂತರ ಜಾವಗಲ್ ವಿಪ್ರ ಮಹಿಳಾ ಮಂಡಳಿಯವರಿಂದ ಸೌಂದರ್ಯಲಹರಿ, ಭಜನೆ ಕಾರ್ಯಕ್ರಮ ನಡೆಯಿತು.
ಇದರ ಮುಖಂಡತ್ವವನ್ನು ಸೂರ್ಯನಾರಾಯಣಭಟ್, ಶಿವಸ್ವಾಮಿ, ಜಾವಗಲ್ ಮುರುಳಿ, ನಾರಾಯಣ, ನರಸಿಂಹಸ್ವಾಮಿ ವಹಿಸಿದ್ದರು.