ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹಾರನಹಳ್ಳಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ

Rashmi Kasaragodu
Updated On : 4 Jun 2014, 1:08 am

ಹಾರನಹಳ್ಳಿ (ಅರಸೀಕೆರೆ ತಾ.): ಹಾರನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗಿದ್ದು ನೀರಿಗಾಗಿ ಹಾಹಾಕಾರ ಪಡುವ ಸ್ಥಿತಿ ಉಂಟಾಗಿದ್ದರೂ ತಾಲೂಕು ಆಡಳಿತ ಕಣ್ಣುಮುಚ್ಚಿ ಕುಳಿತಿದೆ ಎಂದು ಹಾರನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಚ್.ಎಸ್. ನಂದೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿರುವುದಾಗಿ ಹೇಳಿ ಸರಿಯಾಗಿ ನೀರು ಸರಬರಾಜು ಮಾಡದೆ  ಹಣ ಪಡೆಯಲು ಮುಂದಾಗಿದ್ದಾರೆ ಇದರ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
3 ತಿಂಗಳಿಂದ ಪಂಚಾಯಿತಿಯಿಂದ ವಿದ್ಯುತ್ ಬೀದಿ ದೀಪಗಳ ಬಲ್ಬ್‌ಗಳು ಕೆಟ್ಟು ಹೋಗಿದ್ದರೂ ಹೊಸದನ್ನು   ಅಳವಡಿಸದೆ ಜನರು ಕತ್ತಲ್ಲಿ ಇರುವ ಸ್ಥಿತಿ  ಉಂಟಾಗಿದೆ.
 ಗ್ರಾಮ ಪಂಚಾಯತಿ ಅದ್ಯಕ್ಷರಿಗೆ ಈ ಬಗ್ಗೆ ತಿಳಿಸಿದರೂ ಏನೂ ಪ್ರಯೋಜನವಾಗಿಲ್ಲ, ಅವರು ಇದ್ದರೂ ಇಲ್ಲದ ಸ್ಧಿತಿ ಉಂಟಾಗಿದೆ ಎಂದು ಆರೋಪಿಸಿದರು.
ಎ.ಕೆ. ಕಾಲೊನಿ, ಜೇನುಕಲ್‌ನಗರ,  ಜನತಾ ಬಡಾವಣೆ, ಸಿದ್ದರಾಮೇಶ್ವರ ವಠಾರಕ್ಕೆ ಪ್ರತಿ ನಿತ್ಯ ನೀರು ಸರಬರಾಜು ಮಾಡಬೇಕು, ತುರ್ತಾಗಿ ಎರಡು ಕೊಳವೆ ಬಾವಿ ಕೊರೆಸುವ ಮೂಲಕ ಶೀಘ್ರವೇ ನೀರು ಸರಬರಾಜು ಮಾಡದಿದ್ದಲ್ಲಿ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ, ರಸ್ತೆ ತಡೆ ನಡೆಸುವ ಮೂಲಕ ಬೃಹತ್  ಪ್ರತಿಭಟನೆ ಹಮ್ಮಿಕೊಳ್ಳಲು ಇಲ್ಲಿನ ಅಂಬೇಡ್ಕರ್ ಸಂಘ, ಸಿದ್ದರಾಮೇಶ್ವರ ಸಂಘ, ಸೋಮೇಶ್ವರ ಯುವಕ ಸಂಘ, ಸ್ತ್ರೀ ಶಕ್ತಿ ಸಂಘಗಳು, ಹಾರನಹಳ್ಳಿ ಗ್ರಾಮಸ್ಧರು ನಿರ್ಧರಿಸಿರುವುದಾಗಿ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement