ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಿತ್ತೂರು ರಾಣಿ ಚೆನ್ನಮ್ಮ ಶಾಲೆ ವಿಳಾಸ ಬದಲಾವಣೆಗೆ ಒತ್ತಾಯ

Rashmi Kasaragodu
Updated On : 6 Jun 2014, 1:40 am

ಅರಸೀಕೆರೆ: ತಾಲೂಕಿನ ಬಾಣಾವರ ಸಮೀಪ ಬಸವನಹಳ್ಳಿ ಬಳಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ಶಾಲೆ ವಿಳಾಸವನ್ನು ಬದಲಿಸಬೇಕೆಂದು ಪೋಷಕರು ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ತಾಲೂಕಿನ ಬಾಣಾವರ ಸಮೀಪದ ಸುಮಾರು 5 ಕಿ.ಮೀ. ದೂರದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ನಿರ್ಮಾಣಗೊಂಡು ಕಳೆದ ಒಂದು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದೆ.  
ಆದರೆ, ಈ ವಸತಿ ಶಾಲಾ ವಿಳಾಸ ನೀಡುವಾಗ ಆಗಿರುವ ಅಚಾತುರ್ಯದಿಂದ ಮಕ್ಕಳನ್ನು ಶಾಲೆಗೆ ದಾಖಲಿಸಲು ಕರೆ ತರುವ ವೇಳೆ ಪೋಷಕರು ಪರದಾಡುವ ಸ್ಥಿತಿ ಉಂಟಾಗಿದ್ದು, ಸುಮರು 1 ಕಿ.ಮೀ. ಗೂ ಹೆಚ್ಚು ದೂರ ವಿದ್ಯಾರ್ಥಿಗಳು ಮತ್ತು ಪೋಷಕರು ನಡೆದುಕೊಂಡು ಬರಬೇಕಾದ ದುಸ್ಥಿಃತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.



ವಾಸ್ತವ ಸ್ಥಿತಿ
ಶಾಲೆ ನಿರ್ಮಾಣವಾಗಿರುವುದು ಬಸವನಹಳ್ಳಿ ಗೇಟ್ ಸಮೀಪ, ಆದರೆ ವಿಳಾಸದಲ್ಲಿ ಚಿಕ್ಕಾರೆಹಳ್ಳಿ ಗೇಟ್ ಎಂದು ನಮೂದಿಸಿರುವುದರಿಂದ ಪೋಷಕರು ಶಾಲೆಯಿಂದ ಒಂದೆರಡು ಕಿ.ಮೀ. ದೂರ ಚಿಕ್ಕಾರೆಹಳ್ಳಿ ಗೇಟ್ ಬಳಿ ಇಳಿದು ನಂತರ ಬಸವನಹಳ್ಳಿ ಗೇಟ್ ಸಮೀಪಕ್ಕೆ ತಲುಪಬೇಕಾಗಿದೆ. ಇದರಿಂದಾಗಿ ಗೊಂದಲ ಉಂಟಾಗುತ್ತಿದ್ದು ಶಿಕ್ಷಣಾ ಇಲಾಖೆ ಅಧಿಕಾರಿಗಳು ಸರಿಯಾದ ವಿಳಾಸ ನೀಡುವ ಮೂಲಕ ಸಮಸ್ಯೆ ಉಂಟಾಗುವುದನ್ನು ತಪ್ಪಿಸಬೇಕೆಂದು ಪೋಷಕರು ಮನವಿ ಮಾಡಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement