ಕೆ-ಕಿಸಾನ್: ಆನ್‌ಲೈನ್‌ನಲ್ಲಿ ಪಹಣಿ
ಹಾರನಹಳ್ಳಿ: ರೈತರ ಸೌಲಭ್ಯಕ್ಕಾಗಿ ಕೃಷಿ ಇಲಾಖೆ ಕೆ-ಕಿಸಾನ್ ಎಂಬ ಆನ್‌ಲೈನ್ ನೋಂದಣಿ ವ್ಯವಸ್ಥೆ ಮಾಡುತ್ತಿದ್ದು, ಇದರಿಂದ ಪಹಣಿಯನ್ನು ಪಡೆಯಬಹುದು ಎಂದು ಕಸಬಾ ಹೊಬಳಿ ಕೃಷಿ ಅಧಿಕಾರಿ ಕಾಂತರಾಜ್ ತಿಳಿಸಿದ್ದಾರೆ
ಹಾರನಹಳ್ಳಿ ರೈತರು ಕೃಷಿ ಇಲಾಖೆಯಿಂದ ಬೀಜ ಗೊಬ್ಬರ ಔಷಧ ಕೃಷಿ ಉಪಕರಣ ಸೌಲಭ್ಯ ಪಡೆಯ ಬೇಕಾದರೆ ರೈತರ ಜಮೀನಿನ ಪಹಣಿ ಕಡ್ಡಾಯವಾಗಿದೆ. ಆದರೆ, ಪಹಣಿ ಪಡೆಯಲು ತಹಸೀಲ್ದಾರ್ ಕಚೇರಿ ಮಂದೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿ ಸರಿಯಾದ ಸಮಯಕ್ಕೆ ಪಹಣಿ ಸಿಗದೆ ಕೃಷಿ ಇಲಾಖೆಯಿಂದ ಬೀಜ ಔಷಧ ಇತರೆ ಕೃಷಿ ಉಪಕರಣಗಳನ್ನು ಪಡೆಯಲು ಕಷ್ಟಕರವಾಗಿತ್ತು ಇಂತಹ ಸಮಸ್ಯೆಯನ್ನು ಅರಿತು ಕೆ ಕಿಸಾನ್ ಎಂಬ ಆನ್‌ಲೈನ್ ನೋಂದಣಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಸರ್ಕಾರ 2014-15ನೇ ಸಾಲಿನಿಂದ ರೈತರ ಸಂಪೂರ್ಣ ವಿವರ ಭೂಮಿ ಭೂ ಹಿಡುವಳಿ ಕೃಷಿ ಉಪಕರಣಗಳನ್ನು ತೆಗೆದುಕೊಂಡ ಮಾಹಿತಿ ಬ್ಯಾಂಕ್ ಪಾಸ್ ಪುಕ್ ಸಂಖ್ಯೆ, ಆಧಾರ್ ಕಾರ್ಡು ರೃತರ ದೂರವಾಣಿ ಹಾಗೂ ಸಂಚಾರ ದೂರವಾಣಿ ಸಂಖ್ಯೆ ಪಡಿತರ ಚೀಟಿ ಮತದಾರರ ಗುರುತಿನ ಚೀಟಿ ಇವೂಗಳ ಸಂಪೂರ್ಣ ಮಾಹಿತಿಯನ್ನು ಆನ್ ಲೈನ್ ನೋಂದಣಿ ಮಾಡಲಾಗುತ್ತಿದೆ, ಇದರಿಂದ ಕೃಷಿ ಇಲಾಖೆ ನೀಡುವ ಸೌಲಭ್ಯಗಳು ನೇರವಾಗಿ ರೈತ ಪಲಾನುಭವಿಗಳಿಗೆ ಸೇರುತ್ತದೆ ಎಂದು ಹೇಳಿದರು.
ಹೆಚ್ಚಿನ ಮಾಹಿತಿಗೆ ಕಾಂತರಾಜ್ ಕೃಷಿ ಅಧಿಕಾರಿ ಮೊಬೆಲ್ ಸಂಖ್ಯೆ 7259005435 ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳುವಂತೆ ಹಾಗೂ ಈ ಯೋಜನೆಗೆ ರೈತರು ಹೆಚ್ಚಿನ ಸಹಕಾರ ನೀಡುವಂತೆ ಕೋರಿದ್ದಾರೆ.