ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪರಿಸರ ರಕ್ಷಣೆ: ಎಲ್ಲರ ಆದ್ಯ ಕರ್ತವ್ಯವಾಗಲಿ

Rashmi Kasaragodu
Updated On : 6 Jun 2014, 1:41 am

ಹೊಳೆನರಸೀಪುರ: ಮುಂದಿನ ಪೀಳಿಗೆಯು ಆರೋಗ್ಯ ಮತ್ತು ಸುಭೀಕ್ಷತೆಯಿಂದ ಜೀವಿಸಲು ಇಂದು ಪ್ರತಿಯೊಬ್ಬರೂ ಪರಿಸರವನ್ನು ಜತನದಿಂದ ಸಂರಕ್ಷಿಸಿದಾಗ ಮಾತ್ರ ಸಾಧ್ಯ ಎಂದು ಇಲ್ಲಿನ ಹಿರಿಯ ಸಿವಿಲ್ ಜಡ್ಡ್ ಮತ್ತು ಜೆಎಂಎಫ್‌ಸಿ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷ ಜಿ.ಎಂ. ಶೀನಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಅರಣ್ಯ ಇಲಾಖೆ ಮತ್ತು ಲಯನ್ಸ್ ಕ್ಲಬ್‌ನ ಸಂಯುಕ್ತಾಶ್ರಯದಲ್ಲಿ ನ್ಯಾಯಾಲಯದ ಆವರಣದಲ್ಲಿ ಗುರುವಾರ ವಿಶ್ವ ಪರಿಸರ ದಿನ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಕೃತಿ ಮತ್ತು ನಮ್ಮ ಸುತ್ತಲಿನ ಪರಿಸರವನ್ನು ಉತ್ತಮ ರೀತಿಯಲ್ಲಿ ಉಳಿಸುವ ನೈತಿಕ ಹೊಣೆಗಾರಿಕೆ ಪ್ರಜ್ಞಾವಂತ ನಾಗರಿಕರೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಪ್ರಕೃತಿ ಸಂರಕ್ಷಣೆ ಕುರಿತಂತೆ ಮಾಧ್ಯಮಗಳು ಇನ್ನಷ್ಟು ಹೆಚ್ಚಿನ ಜವಾಬ್ದಾರಿಯೊಂದಿಗೆ ಪ್ರಚಾರ ನೀಡುವ ಅವಶ್ಯಕತೆ ಇದೆ. ಇಂದಿನ ದಿನಗಳಲ್ಲಿನ ಬಹುದೊಡ್ಡ ಸಮಸ್ಯೆಗಳಾದ ಅಂತರ್ಜಲ ಕುಸಿತ, ಫ್ಲೋರೈಡ್ ಸಮಸ್ಯೆ ಬಗ್ಗೆ ಹೆಚ್ಚು ಒತ್ತು ನೀಡಿ ಪ್ರಚಾರ ನಡೆಸಬೇಕಿದೆ.  ಜೊತೆಗೆ ನದಿಗಳಿಂದ ಮರಳು ತೆಗೆಯುವುದು, ಫಿಲ್ಟರ್ ಮರಳು ದಂಧೆಗಳಂತಹ ಕೃತ್ಯಗಳನ್ನು ತಡೆಗಟ್ಟದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಶುದ್ಧ ಕುಡಿಯುವ ನೀರಿನ ಲಭ್ಯತೆ ಮರೀಚಿಕೆ ಆಗಬಹುದು ಎಂಬ ಆತಂಕವನ್ನು ಹಿರಿಯ ನ್ಯಾಯಾಧೀಶ ಜಿ.ಎಂ.ಶೀನಪ್ಪ ವ್ಯಕ್ತಪಡಿಸಿದರು.
ಹಾಸನದ ಹೊಯ್ಸಳ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಎಂ. ಇ. ಚಂದ್ರೇಗೌಡ, ವಕೀಲರ ಸಂಘದ ಅಧ್ಯಕ್ಷ ಆರ್.ಡಿ. ರವೀಶ್, ಲಯನ್ಸ್ ಕ್ಲ್ಲಬ್ ಅಧ್ಯಕ್ಷ ಎಚ್. ಆರ್. ಮುಕುಂದೇಗೌಡ, ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಕೆ. ಶ್ರೀನಿವಾಸಮೂರ್ತಿ, ವಲಯ ಅರಣ್ಯಾಧಿಕಾರಿ ಪಿ. ಸಿ. ರವೀಂದ್ರ, ಲಯನ್ಸ್ ಖಜಾಂಚಿ ಎಂ.ಎನ್. ಜೈಪ್ರಕಾಶ್, ಸಹಾಯಕ ಸರ್ಕಾರಿ ಎಂಜಿನಿಯರ್‌ಗಳಾದ ಮಲ್ಲಿಕಾರ್ಜುನ ದೊಡ್ಡಗೌಡರ್ ಹಾಗೂ ಬಿ.ಇ. ಯೋಗೇಶ್ವರ್ ಮತ್ತು ವಕೀಲ ಮಿತ್ರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement