ಬಾಸ್ಕೆಟ್ಬಾಲ್: ಬಾಲಕಿಯರ ಆಯ್ಕೆಗೆ ಪರೀಕ್ಷೆ
ಹಾಸನ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಾಸನ ಇವರ ವತಿಯಿಂದ ನಡೆಸುತ್ತಿರುವ ವಸತಿ ಶಾಲೆಯಲ್ಲಿ 2014-15ನೇ ಸಾಲಿನಿಂದ ಬ್ಯಾಸ್ಕೆಟ್ ಬಾಲ್ ಕ್ರೀಡೆಯನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಲಾಗಿದೆ. 2014-15ನೇ ಸಾಲಿಗೆ ಬಾಸ್ಕೆಟ್ ಬಾಲ್ ಕ್ರೀಡೆಗೆ ಬಾಲಕಿಯರನ್ನು ಆಯ್ಕೆ ಮಾಡಲು ಜೂನ್ 12 ರಂದು ಬೆಳಿಗ್ಗೆ 10 ಗಂಟೆಗೆ ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ವಿಶೇಷ ಆಯ್ಕೆ ಪರೀಕ್ಷೆ ಏರ್ಪಡಿಸಲಾಗಿದೆ.
2013-14ನೇ ಸಾಲಿನಲ್ಲಿ 4ನೇ ವರ್ಗ ಪಾಸಾಗಿದ್ದು 2014-15ನೇ ಸಾಲಿನಲ್ಲಿ 5ನೇ ವರ್ಗ ಪ್ರವೇಶಾತಿ ಪಡೆಯಲು ಅರ್ಹರಿರಬೇಕು. 11 ವರ್ಷದೊಳಗಿರಬೇಕು. ಈ ಬಗ್ಗೆ ಜನ್ಮ ದಿನಾಂಕ ದೃಡೀಕರಣ ತರತಕ್ಕದ್ದು(1-6-2014ಕ್ಕೆ 11 ವರ್ಷದೊಳಗಿರಬೇಕು), ಕನಿಷ್ಠ 142 ರಿಂದ 145 ಸೆ.ಮೀ. ಎತ್ತರ ಇರಬೇಕು. ಹಾಸನ ಜಿಲ್ಲೆಯ ಬಾಲಕಿಯರು ಮಾತ್ರ ಆಯ್ಕೆಗೆ ಅರ್ಹರು. ಹೆಚ್ಚಿನ ಮಾಹಿತಿಗೆ ಸುಬ್ರಹ್ಮಣ್ಯ, ದೂ. 9449755949 ಸಂಪರ್ಕಿಸವಂತೆ ಹಾಸನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶಿವಾನಂದ ಕೋರಿದ್ದಾರೆ.