ರಾಷ್ಟ್ರಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ
ಹಾಸನ: ಮೈಸೂರಿನ ಜೆಎಸ್‌ಎಸ್ ಆಯುರ್ವೇದ ಮಹಾವಿದ್ಯಾಲಯದಲ್ಲಿ ಬೆಂಗಳೂರಿನ ಅಟ್ರಿಮೆಡ್ ಫಾರ್ಮಸ್ಯುಟಿಕಲ್ ಪ್ರಾಯೋಜಕತ್ವದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಆಯುರ್ವೇದ ರಸಪ್ರಶ್ನೆ ಸ್ಪರ್ಧೆಯಲ್ಲಿ ಹಾಸನದ ಎಸ್.ಡಿ.ಎಂ ಆಯುರ್ವೇದ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಳಾದ ಡಾ. ವಿರೂಪಾಕ್ಷಯ್ಯ ಹಾಗೂ ಡಾ. ಎಂ. ಸುಶೋಭಿತಾ ಅವರಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಡಾ. ಧರ್ಮೇಂದ್ರ ಮೌರ್ಯ ಹಾಗೂ ಡಾ. ವಿವೇಕ್ ಸೋಲಾಪುರ್‌ಕರ್ ಅವರು ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಕುಮಾರಾನ್ವೇಷಣಾ-2014 ಶೀರ್ಷಿಕೆಯಡಿ ಆಯುರ್ವೇದ ಬಾಲರೋಗ ಚಿಕಿತ್ಸಾ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನಾಧರಿಸಿದ ಈ ರಸಪ್ರಶ್ನೆ ಸ್ಪರ್ಧೆಯಲ್ಲಿ ಕರ್ನಾಟಕದ 12 ಆಯುರ್ವೇದ ಕಾಲೇಜುಗಳು ಹಾಗೂ ಕೇರಳದ 02 ಕಾಲೇಜುಗಳಿಂದ ಒಟ್ಟು 40 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಪ್ರಾಂಶುಪಾಲ ಡಾ. ಪ್ರಸನ್ನ ನರಸಿಂಹರಾವ್ ಹಾಗೂ ಬಾಲರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ. ಶೈಲಜಾ. ಯು ವಿದ್ಯಾರ್ಥಿಗಳ ಈ ಸಾಧನೆಯನ್ನು ಶ್ಲಾಘಿಸಿದರು.