ರೈತನ ಮೇಲೆ ಚಿರತೆ ದಾಳಿ
ಚನ್ನರಾಯಪಟ್ಟಣ: ದನಗಳನ್ನು ಮೇಯಿಸುತ್ತಿದ್ದ ಸಂದರ್ಭದಲ್ಲಿ ಚಿರತೆಯೊಂದು ರೈತನ ಮೇಲೆ ದಾಳಿ ಮಾಡಿರುವ ಘಟನೆ ತಾಲೂಕಿನ ಮರವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮರುವನಹಳ್ಳಿ ಗ್ರಾಮದ ರೈತ ಶಿವಶಂಕರ್(50) ಈತ ತನ್ನ ಜಮೀನಿನಲ್ಲಿ ದನಗಳನ್ನು ಮೇಯಿಸುತ್ತಿದ್ದ ಸಂದರ್ಭದಲ್ಲಿ ಚಿರತೆ ಇವರ ಮೇಲೆ ದಾಳಿ ನಡೆಸಿ ಮುಖ ಹಾಗೂ ಬೆನ್ನಿಗೆ ಗಾಯಗೊಳಿಸಿದೆ.
ಈ ಸಂದರ್ಭದಲ್ಲಿ ಅವರು ಜೊರಾಗಿ ಕೂಗಿಕೊಂಡು, ಅದರಿಂದ ತಪ್ಪಿಸಿಕೊಳ್ಳುವ ಸಂದಭರ್ದದಲ್ಲಿ ಪಕ್ಕದಲ್ಲಿದ್ದ ಹಳ್ಳಕ್ಕೆ ಬಿದ್ದ ಚಿರತೆ ಗಾಬರಿಗೊಂಡು ಅಲ್ಲಿಂದ ಕಾಲ್ಕಿತ್ತಿದೆ.
ಕಳೆದ ಒಂದು ವಾರದಲ್ಲಿ ಇದೇ ಚಿರತೆ ಮರುವನಹಳ್ಳಿ ಗ್ರಾಮದಲ್ಲಿ ಎರಡು ಜಾನುವಾರುಗಳನ್ನು ಬಲಿ ತೆಗೆದುಕೊಂಡಿದೆ. ಗಾಯಗೊಂಡವರಿಂದ ದೂರು ದಾಖಲಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಮರುವನಹಳ್ಳಿಯಲ್ಲಿ ಚಿರತೆ ಹಿಡಿಯುವ ಕಾರ್ಯದಲ್ಲಿ ತೊಡಗಿದೆ ಎಂದು ಧರ್ಮಪ್ಪ ತಿಳಿಸಿದ್ದಾರೆ.