ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನಿಲ್ಲದ ಬೀದಿ ನಾಯಿಗಳ ದಾಳಿ, ಒಂಬತ್ತು ಮಂದಿಗೆ ಗಾಯ

Rashmi Kasaragodu
Updated On : 7 Jun 2014, 12:55 pm

ಹೊಳೆನರಸೀಪುರ : ಪಟ್ಟಣದ ನಾನಾ ಬಡಾವಣೆಗಳಲ್ಲಿ ಒಬ್ಬ ಬಾಲಕ ಸೇರಿದಂತೆ 9 ಜನರಿಗೆ ಬೀದಿ ನಾಯಿಗಳು ಕಚ್ಚಿರುವ ಪ್ರಕರಣ ಶುಕ್ರವಾರ ಸಂಜೆ ನಡೆದಿದ್ದು, ಮಹಿಳೆಯೊಬ್ಬರಿಗೆ ಗಂಭಿರ ಸ್ವರೂಪದ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನದಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇಲ್ಲಿನ ಹಾಸನ-ಮೈಸೂರು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಸವಿತಾ ಎಂಬುವರಿಗೆ ಬೀದಿ ನಾಯಿಯೊಂದು ದಾಳಿ ನಡೆಸಿ ಮಹಿಳೆಯ ಎಡಗಾಲು ಹಾಗೂ ಎಡ ತೋಳಿಗೆ ಕಚ್ಚಿದೆ. ಎಡತೋಳಿನ ಮಾಂಸ ಖಂಡವೇ ಹೊರಬಂದಿದ್ದು, ತೀವ್ರ ಸ್ವರೂಪದ ಗಾಯವಾಗಿರುವ ಆಕೆಗೆ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿನ ವೈದ್ಯ ಡಾ.ದಿನೇಶ್ ಹಾಗೂ ಅರವಳಿಕೆ ತಜ್ಞ ಡಾ.ವಿಜಯಕುಮಾರ್ ಪ್ರಥಮ ಚಿಕಿತ್ಸೆ ನೀಡಿದರು.
ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು. ಇದೇ ವೇಳೆ ಪಟ್ಟಣದ ಅಂಬೇಡ್ಕರ್ ನಗರದ ಮುಖ್ಯ ರಸ್ತೆಯಲ್ಲಿ ದ್ಯಾವಯ್ಯ ಎಂಬುವವರಿಗೂ ಬೀದಿ ನಾಯಿಯೊಂದು ಕಚ್ಚಿದ ಪರಿಣಾಮ ಅವರ ಬಲಗಾಲಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ಸೇರಿದ್ದಾರೆ. ಅಲ್ಲದೇ ಪಟ್ಟಣದ ನರಸಿಂಹನಾಯಕ ಬಡಾವಣೆಯಲ್ಲಿ ಸುಮಂತ್ ಎಂಬ ಬಾಲಕನಿಗೂ ಬೀದಿ ನಾಯಿ ಕಚ್ಚಿದೆ.
ನಾಯಿ ಹಿಡಿಯುವಲ್ಲಿನ ಪುರಸಭೆಯ ಧೋರಣೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement