ನೈರ್ಮಲ್ಯ ಕಾಪಾಡಿ ಪರಿಸರ ಸಂರಕ್ಷಿಸೋಣ
ಅರಸೀಕೆರೆ: ವಿಶ್ವ ಪರಿಸರ ದಿನ ಅಂಗವಾಗಿ ಪಟ್ಟಣದ ಪುರಸಭಾ ಮುಂಭಾಗದ ಆವರಣದಲ್ಲಿ ಪುರಸಭಾಧ್ಯಕ್ಷ ಮೋಹನ್ಕುಮಾರ್ ಸಸಿ ನೆಡುವ ಮೂಲಕ ಪರಿಸರ ದಿನ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಟ್ಟಣದ ಪ್ರತಿಯೊಂದು ವಾರ್ಡ್ಗಳಲ್ಲಿ ನೈರ್ಮಲ್ಯ ಕಾಪಾಡುವ ಮೂಲಕ ಪರಿಸರ ಸಂರಕ್ಷಣೆ ಜವಾಬ್ದಾರಿ ಎಲ್ಲ ಪುರಸಭಾ ಚುನಾಯಿತ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗದ ಮೇಲಿದೆ. ಪಟ್ಟಣದ ನಾನಾ ವಾರ್ಡ್ಗಳಲ್ಲಿ ಇರುವ ಉದ್ಯಾನದ ಜಾಗವನ್ನು ನಾವು ಸದುಪಯೋಗ ಪಡಿಸಿಕೊಂಡು ಸುಂದರ ಉದ್ಯಾನವನಗಳ ನಿರ್ಮಾಣ ಕಾರ್ಯಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪುರಸಭಾ ಸದಸ್ಯರ ಸಹಕಾರ ಅಗತ್ಯ ಎಂದರು. ಪುರಸಭೆ ಸದಸ್ಯ ಪಂಚಾಕ್ಷರಿ, ಪರಿಸರ ಎಂಜಿನಿಯರ್ ನವೀನ್, ಆರೋಗ್ಯ ನಿರೀಕ್ಷಕ ಲಿಂಗರಾಜು ಹಾಗೂ ಇತರರು ಇದ್ದರು.
ಕಾರ್ಯಕ್ರಮದಲ್ಲಿ ಹಲವು ಪುರಸಭೆ ಸದಸ್ಯರು ಗೈರು ಹಾಜರಾಗಿದ್ದರು.