ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪರಿಸರದ ಬಗ್ಗೆ ಸಾಮಾಜಿಕ ಕಾಳಜಿ ಅತ್ಯವಶ್ಯಕ

Rashmi Kasaragodu
Updated On : 7 Jun 2014, 12:55 pm

ಜಾವಗಲ್: ಪ್ರಸ್ತುತ ಸನ್ನಿವೇಶದಲ್ಲಿ ಪ್ರತಿಯೊಬ್ಬ ನಾಗರಿಕನಲ್ಲೂ, ಅದರಲ್ಲಿಯೂ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಸಾಮಾಜಿಕ ಕಾಳಜಿ ಅತ್ಯವಶ್ಯಕವಾಗಿದೆ ಎಂದು ಜಾವಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಶಿಕ್ಷಕ ಮರುಳಸಿದ್ದಪ್ಪ ಅಭಿಪ್ರಾಯಪಟ್ಟರು.
ಶಾಲೆಯ ಇಕೋ ಕ್ಲಬ್ ವತಿಯಿಂದ ಏರ್ಪಡಿಸಲಾಗಿದ್ದ ವಿಶ್ವಪರಿಸರ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ನಗರ ಪ್ರದೇಶಗಳಂತೆ ಇಂದು ಗ್ರಾಮೀಣಪ್ರದೇಶಗಳೂ ಮಾಲಿನ್ಯತೆಯಿಂದ ಕೂಡಿದೆ. ಹಿಂದೆ ಹಳ್ಳಿಗಳ ಜನರಲ್ಲಿ ಪರಿಸರ ಪ್ರಜ್ಞೆ ಹೆಚ್ಚಾಗಿತ್ತು. ಉತ್ತಮ ಅಹಾರ, ಗಾಳಿ ನೀರು ಸೇವನೆ ಮಾಡುತ್ತಿದ್ದರು. ರಾಸಾಯನಿಕಗೊಬ್ಬರಗಳ ಅರಿವು ಇರಲಿಲ್ಲ. ಆದರೆ, ಇಂದು ಪರಿಸ್ಥಿತಿ ಬದಲಾಗಿದ್ದು ರೈತರು ಸಹ ದೈನಂದಿನ ಪದಾರ್ಥಗಳನ್ನು ಕೊಂಡು ತಿನ್ನುವ ಪರಿಸ್ಥಿತಿ ಉಂಟಾಗಿರುವುದು ವಿಷಾದನೀಯವೆಂದರು.
ಹಾಸನದ ಮಡೇನೂರು ಜೈವಿಕ ಇಂಧನ ಉದ್ಯಾನವನದ ಕ್ಷೇತ್ರ ಸಂಚಾಲಕ ರವಿಕುಮಾರ್ ಮಾತನಾಡಿ ಮುಂದಿನ ಪೀಳಿಗೆಗೆ ಪರಿಸರದ ಕಾಳಜಿ ಅತ್ಯಗತ್ಯವಾಗಿದೆ ಎಂದರು. ಜೈವಿಕ ಇಂಧನಗಳು, ಇಂಧನ ಮೂಲದ ಸಸಿಗಳನ್ನು ಬೆಳೆಸುವ ವಿಧಾನ, ಉತ್ಪನ್ನ, ಮಾರುಕಟ್ಟೆ ವ್ಯವಸ್ಥೆ, ಉದ್ಯೋಗಾವಕಾಶ, ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದರು.
ಶಿಕ್ಷಕಿ ಮಮತ ಪರಿಸರದ ಬಗ್ಗೆ ರಚಿಸಿದ ಚುಟುಕು ಕವನವನ್ನು ವಾಚಿಸಿದರು. ಇಕೋಕ್ಲಬ್ನ ಸಂಚಾಲಕಿ ಶಿಕ್ಷಕಿ ಸೌಮ್ಯ, ಬಿ.ರಾಮಲಿಂಗಯ್ಯ ಮಾತನಾಡಿದರು.  ಚಂದ್ರೇಗೌಡ, ಮಮತ, ವಿದ್ಯಾ, ಸವಿತಾ, ಜಯಲಕ್ಷ್ಮೀ, ಶಿವಲಿಂಗಮೂರ್ತಿ ಇದ್ದರು. ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆ, ಪರಿಸರ ಪ್ರಾಜೆಕ್ಟ್ ತಯಾರಿಸಿದ ವಿಜೇತರಿಗೆ ಬಹುಮಾನ ನೀಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement