ಕಪ್ಪೆ ಹಿಡಿಯಲು ಉರಗ ಸಾಹಸ
ಜಾವಗಲ್: ಕೊಳಚೆ ನೀರಿನಲ್ಲಿ ಕಪ್ಪೆಯೊಂದನ್ನು ಹಿಡಿಯಲು ಉರಗ ಹರಸಾಹಸಪಡುತ್ತಿದ್ದ ಅಪರೂಪದ ದೃಶ್ಯ ಕಂಡಬಂತು.
ಜಾವಗಲ್ನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 234ರ ಸಮೀಪ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿ ಮಳೆ ಮತ್ತು ಮೋರಿಯ ತ್ಯಾಜ್ಯ ವಸ್ತು ನೀರಿನ ಶೇಖರಣೆಯಾಗಿ ಹೊಂಡದಂತಾಗಿತ್ತು. ರಾತ್ರಿ ಶಾಲೆಯ ಮುಂಭಾಗದಲ್ಲಿ ನಿಂತಿರುವ ಕೆಸರು ನೀರಿನಲ್ಲಿ ಹಾವೊಂದು ಆಹಾರಕ್ಕಾಗಿ ಕಪ್ಪೆಯನ್ನು ಹಿಡಿಯಲು ಸಾಹಸಪಡುತ್ತಿತ್ತು. ಸುಮಾರು 2-3 ಹಾವಿನ ಮರಿಗಳು ಕೆಸರಿನಲ್ಲಿ ಸರಾಗವಾಗಿ ಹೋಗಲಾಗದೆ ಶ್ರಮ ಪಡುತ್ತಿದ್ದವು. ಈ ದೃಶ್ಯಗಳನ್ನು ಶಾಲೆಯ ಮುಂಭಾಗದಲ್ಲಿರುವ ಎಸ್ಆರ್ಎಸ್ ಕಂಪ್ಯೂಟರ್ ಸೆಂಟರ್ ಮತ್ತು ಡಿಜಿಟಲ್ ಸ್ಟೂಡಿಯೋ ಗಂಗಾಧರ್ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದದರು.