ಡೆಂಘೀ ಜ್ವರ ನಿಯಂತ್ರಣಕ್ಕೆ ಸಹಕಾರ ಅಗತ್ಯ
ಹಾಸನ: ಡೆಂಘೀ ರೋಗವನ್ನು ನಿಯಂತ್ರಿಸಲು ಸ್ವಚ್ಚ ಮತ್ತು ಮನೆಗಳಲ್ಲಿನ ನೀರಿನ ಸಂಗ್ರಹಣೆಯಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ಎಚ್ಚರ ವಹಿಸುವುದು ಅತ್ಯಗತ್ಯವಾಗಿದ್ದು, ಇದಕ್ಕೆ ಪ್ರತಿಯೊಬ್ಬರ ಸಹಕಾರ ಅವಶ್ಯವಾಗಿದೆ ಎಂದು ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎನ್.ಎನ್.ರಾಜಗೋಪಾಲ್ ತಿಳಿಸಿದ್ದಾರೆ.
ಲಕ್ಷಣಗಳು
ಸೋಂಕಿತ ಈಡಿಸ್ ಈಜಿಪ್ಟೈ ಸೊಳ್ಳೆ ಕಡಿತದಿಂದ ಡೆಂಘೀ ರೋಗ ಹರಡುತ್ತದೆ. ಇದು ವೈರಸ್ನಿಂದ ಬರುವ ಕಾಯಿಲೆಯಾಗಿದ್ದು ಇದರಲ್ಲಿ ಮೂರು ವಿಧ, ಸಾಮಾನ್ಯ ಡೆಂಘೀ, ಡೆಂಘೀ ರಕ್ತಸ್ರಾವ ಮತ್ತು ಡೆಂಘೀ ಶಾಕ್ ಸಿಂಡ್ರೋಮ್. ಇದ್ದಕ್ಕಿದ್ದಂತೆ ಬರುವ ತೀವ್ರ ಜ್ವರ, ತೀವ್ರ ತಲೆ ನೋವು, ಮೈಕೈ ನೋವು ಮತ್ತು ಕೀಲು ನೋವು ಕಣ್ಣುಗಳ ಹಿಂಭಾಗ ನೋವು, ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತ ಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಇವು ಡೆಂಘೀ ರೋಗದ ಪ್ರಮುಖ ಲಕ್ಷಣಗಳಾಗಿವೆ. ರೋಗ ಲಕ್ಷಣಗಳು ಕಂಡು ಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಅಗತ್ಯ. ಸ್ವಯಂ ಚಿಕಿತ್ಸೆ ಅಪಾಯವನ್ನು ಆಹ್ವಾನಿಸುತ್ತದೆ ಎಂದು ತಿಳಿಸಿದ್ದಾರೆ.
ಈ ರೋಗಕ್ಕೆ ಲಸಿಕೆಯಾಗಲಿ, ನಿರ್ದಿಷ್ಟ ಔಷಧಯಾಗಲೀ ಇರುವುದಿಲ್ಲ. ಬದಲಾಗಿ ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಿದರೆ ಹೆಚ್ಚಿನ ತೊಂದರೆಗಳಾಗುವುದನ್ನು ತಪ್ಪಿಸಬಹುದು ಎಂದಿದ್ದಾರೆ.
ರೋಗ ನಿಯಂತ್ರಣ
ಕ್ಠಿಜಢಜಟಿಡ್ಝ್ಟಿಟಿ ್ಝಡ ಛಿಜಡಿಡಿಜ್ಠ ಝಿಛಟಿ ್ಛ್ಡ್ಠಜ. ಈ ರೋಗವು ಬರದಂತೆ ನೋಡಿಕೊಳ್ಳಲು ಸೊಳ್ಳೆಗಳ ಉತ್ಪತ್ತಿ ತಾಣಗಳ ನಿರ್ಮೂಲನೆ ಒಂದೇ ಪ್ರಮುಖ ರಾಮಬಾಣ. ನೀರಿನ ತೊಟ್ಟಿಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ, ಸ್ವಚ್ಚ ಮಾಡಿ ಒಣಗಿಸಿ ನಂತರ ನೀರನ್ನು ತುಂಬಿ ಮೇಲೆ ಮುಚ್ಚಳದಿಂದ ಮುಚ್ಚಬೇಕು. ಮನೆ ಒಳಗೆ ಮತ್ತು ಸುತ್ತ ಮುತ್ತ ಯಾವುದೇ ಕಾರಣಕ್ಕೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಒಡೆದ ಬಾಟಲಿ, ಟಿನ್, ಟೈರ್, ಪ್ಲಾಸ್ಟಿಕ್ ಲೋಟಗಳು, ಎಳನೀರಿನ ಬುರುಡೆ, ಚಿಪ್ಪು ಇತರೆ ಯಾವುದೇ ಕಡೆ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಿ ಅವುಗಳನ್ನು ಸೂಕ್ತ ವಿಲೇವಾರಿ ಮಾಡಬೇಕು ಎಂದು ಹೇಳಿದ್ದಾರೆ.
ಬೆಂಕಿ ಆರಿಸುವ ಬಕೆಟ್ಗಳಲ್ಲಿ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಭರ್ತಿ ಮಾಡುವುದು. ಏರ್ ಕೂಲರನ್ನು ಆಗಾಗ್ಗೆ ಬದಲಾಯಿಸುವುದು, ಮಲಗುವಾಗ ತಪ್ಪದೇ ಸೊಳ್ಳೆ ಪರದೆ ಬಳಸಬೇಕು, ಮನೆ ಕಿಟಕಿಗಳಿಗೆ ಸೊಳ್ಳೆ ನಿಯಂತ್ರಣ ಜಾಲರಿ ಅಳವಡಿಸಬೇಕು ಎಂದು ತಿಳಿಸಿದ್ದಾರೆ. ವಿವರಗಳಿಗೆ ದೂ: 08172-246828