ಪ್ರಕೃತಿ ಸಂಪತ್ತು ಬದುಕಿಗೆ ಪೂರಕ
ಅರಸೀಕೆರೆ: .ಪ್ರಕೃತಿಯಲ್ಲಿನ ಪ್ರತಿಯೊಂದು ಜೀವರಾಶಿ ಬದುಕಲು ಬೇಕಾದ ಎಲ್ಲಾ ರೀತಿಯ ನೈಸರ್ಗಿಕ ಸಂಪತ್ತು ಪ್ರಕೃತಿಯಲ್ಲಿದ್ದು, ಅವುಗಳು ನಮ್ಮ ಬದುಕಿಗೆ ಪೂರಕವಾಗಿವೆ ಎಂದು ಪಟ್ಟಣದ ಸಂತ ಮೆರಿ ಆಂಗ್ಲ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಜಾಯ್ಲೆಟ್ ತಿಳಿಸಿದರು.
ಸಂತ ಮೇರಿ ಶಾಲಾ ಆವರಣದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಸಸಿ ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಪರಿಸರ ರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಿದ್ದು ಮನೆಗೊಂದು ಮರ ಊರಿಗೊಂದು ವನ ಎಂಬ ರೀತಿಯಲ್ಲಿ ಪರಿಸರ ರಕ್ಷಣೆ ಮಾಡಿದಲ್ಲಿ ಸಮಗ್ರವಾಗಿ ಮಳೆ ಬೆಳೆ ಮನುಸಂಕುಲ ಸಂರಕ್ಷಣೆ ಆಗುವುದರಲ್ಲಿ ಸಂದೇಹವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕರಾದ ಜಯರಾಜ್, ಮೋಹನ್ ಕುಮಾರ್, ಡ್ಯಾನೆಡ್ ಹಾಗೂ ವಿದ್ಯಾರ್ಥಿ ಸಮೂಹ ಭಾಗವಹಿಸಿದ್ದರು. ಶಾಲಾ ಮಕ್ಕಳಿಂದ ಪರಿಸರ ಜಾಗೃತಿ ಜಾಥಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪರಿಸರ ಉಳಿಸಿ ಬೆಳೆಸಿ ದೇಶ ಉಳಿಸಿ ಎಂದು ಘೋಷಣೆಯೊಂದಿಗೆ ಜಾಥಾ ನಡೆಸಿದರು.