ಗೃಹ ಸಚಿವರ ಭೇಟಿ ಇಂದು
ಹಾಸನ: ರಾಜ್ಯ ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ಜೂ. 9 ರಂದು ಬೆಳಗ್ಗೆ 10.30 ಕ್ಕೆ ಹಾಸನಕ್ಕೆ ಆಗಮಿಸುವರು. ಅಂದು ಬೆಳಗ್ಗೆ 11 ಕ್ಕೆ ನಗರದ ಸರ್ಕಾರಿ ಅತಿಥಿಗೃಹದಲ್ಲಿ ಚುನಾಯಿತ ಜನಪ್ರತಿನಿಧಿಗಳೊಂದಿಗೆ ಅನೌಪಚಾರಿಕ ಭೇಟಿ ನಡೆಸುವರು. ಮಧ್ಯಾಹ್ನ 12.30 ಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಗೆ ಭೇಟಿ ನೀಡುವರು. ನಂತರ ನಗರದ ಅಂಬೇಡ್ಕರ್ಭ್ವನದಲ್ಲಿ ನಡೆಯುವ ಪೊಲೀಸ್ ಇಲಾಖೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮಧ್ಯಾಹ್ನ 1.30 ಕ್ಕೆ ಪತ್ರಿಕಾ ಸಂದರ್ಶನದಲ್ಲಿ ಪಾಲ್ಗೊಳ್ಳುವರು. ನಂತರ ಸಚಿವರು ಮಧ್ಯಾಹ್ನ 3.15 ಕ್ಕೆ ಹೊಳೆನರಸೀಪುರದಲ್ಲಿ ಅಗ್ನಿಶಾಮಕ ವಸತಿ ಗೃಹ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು.3.45 ಕ್ಕೆ ಚಿಕ್ಕಮಗಳೂರಿಗೆ ತೆರೆಳುವರು