ಮಗುವಿನ ಮೇಲೆ ಬೀದಿ ನಾಯಿಗಳ ದಾಳಿ
ಹಾಸನ: ನಾಲ್ಕು ವರ್ಷದ ಮಗುವಿನ ಮೇಲೆ ಬೀದಿನಾಯಿಗಳು ದಾಳಿ ನಡೆಸಿ ಗಾಯಗೊಳಿಸುವ ಘಟನೆ ನಗರದಲ್ಲಿ ಭಾನುವಾರ ನಡೆದಿದೆ. ಲಕ್ಷ್ಮಿ (4) ಎಂಬ ಮಗುವಿಗೆ ಬೀದಿನಾಯಿಗಳ ದಾಳಿಗೆ ತುತ್ತಾಗಿ ತೀವ್ರವಾಗಿ ಗಾಯಗೊಂಡು, ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದೆ.
ಹೊಳೆನರಸೀಪುರ ಮೂಲದ ಶಶಿಕಲಾ ಎಂಬವರ ಅಕ್ಕನ ಮಗು ಲಕ್ಷ್ಮಿಯನ್ನು ಇವರು ಫೋಷಣೆ ಮಾಡುತ್ತಿದ್ದು, ಭಾನುವಾರ ಮಗುವಿನೊಂದಿಗೆ ಹಾಸನಕ್ಕೆ ವ್ಯಾಪಾರಕ್ಕೆಂದು ಬಂದಿದ್ದ ಸಂದರ್ಭದಲ್ಲಿ ನಗರದ ಮಹಾರಾಜ ಪಾರ್ಕ್ ನಲ್ಲಿ ಕೆಲ ಸಮಯ ಆಟವಾಡುತ್ತಿದ್ದಾಗ ಮಗುವಿನ ಮೇಲೆ ಬೀದಿನಾಯಿಗಳು ದಾಳಿ ಇತ್ತು, ಕುತ್ತಿಗೆ, ಬೆನ್ನುಸೇರಿದಂತೆ ನಾನಾ ಭಾಗಗಳನ್ನು ಕಚ್ಚಿ ತೀವ್ರವಾಗಿ ಗಾಯಗೊಳಿಸಿವೆ.