ವಾರಸುದಾರರಿಲ್ಲದ ಕಾರು: ನಿರ್ಲಕ್ಷ್ಯ
ಸಕಲೇಶಪುರ: ಕಳೆದೊಂದು ವಾರದಿಂದ ರಾಷ್ಟ್ರೀಯ ಹೆದ್ದಾರಿ 48 ಕಪ್ಪಳಿ ಗ್ರಾಮ ಸಮೀಪ ರಸ್ತೆ ಬದಿಯಲ್ಲಿ ಅನುಮಾನಸ್ಪದವಾಗಿ ಕಾರೊಂದು ನಿಲ್ಲಿಸಲಾಗಿದೆ. ಕೆಂಪುಬಣ್ಣದ ಆಲ್ಟೋ ಕಾರನ್ನು ರಾತ್ರಿ ವೇಳೆ ನಿಲ್ಲಿಸಿಹೋಗಿರುವ ವ್ಯಕ್ತಿಗಳು ಒಂದು ವಾರ ಕಳೆದರು ತೆಗೆದುಕೊಂಡು ಹೋಗಿಲ್ಲ. ಮೇಲ್ನೋಟಕ್ಕೆ ಬೆಂಗಳೂರಿನ ರಿಜಿಸ್ಟರ್ ನಂಬರ್ ಕಂಡು ಬಂದರೂ ನಂ ಪ್ಲೇಟ್ ಅಳಿಸಲಾಗಿದೆ. ಈ ಬಗ್ಗೆ ಪೋಲಿಸರಿಗೆ ಸ್ಥಳೀಯರು ತಿಳಿಸಿದ್ದರೂ ಪೋಲಿಸರು ಕಾರನ್ನು ತೆಗೆದುಕೊಂಡು ಹೋಗಿಲ್ಲ ಎಂದು ದೂರಿದ್ದಾರೆ.