ವಿಶ್ವ ಪರಿಸರ ಸಪ್ತಾಹ
ಬೇಲೂರು: ಪಟ್ಟಣದ ಹೊಳೆಬೀದಿಯಲ್ಲಿ ಇರುವ ಹೊಯ್ಸಳ ಕಾಲೇಜಿನಲ್ಲಿ ಇತ್ತೀಚೆಗೆ ವಿಶ್ವ ಪರಿಸರ ಸಪ್ತಾಹವನ್ನು ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಉಪನ್ಯಾಸಕ ಚಂದ್ರಶೇಖರ್, ಪ್ರಪಂಚದ ಸುಂದರ ದ್ವೀಪಗಳು, ಕಾಡುಗಳು ನಾಶವಾಗುವುದಕ್ಕೆ ಇಂದಿನ ಜನ ಸಮೂಹವೇ ಕಾರಣ. ವೇಗದ ಜೀವನಕ್ಕೆ ಅಂಟಿದ ಜನರ ಅತಿ ಆಸೇಯೇ ಕಾರಣ. ಪರಿಸರವನ್ನು ನಾಶಮಾಡಿ ಮರ ಗಿಡಗಳನ್ನು ಕಡಿದು ಪ್ರಪಂಚದ ವಿನಾಶಕ್ಕೆ ಕಾರಣನಾಗಿದ್ದಾನೆ. ಒಳ್ಳೆಯ ಗಾಳಿ ನೀರು ಸಿಗದ ಕಾರಣ ಜನರು ಕೃತಕ ಗಾಳಿಗಾಗಿ ಎಸಿ ಹಾಗೂ ಎಲೆಕ್ಟ್ರಾನಿಕ್ ಯಂತ್ರಗಳಿಗೆ ಮಾರು ಹೋಗಿ ಅನಾರೋಗ್ಯಕ್ಕೆ ತುತ್ತಾಗಿ ಅನೇಕ ಕಾಯಿಲೆಗಳಿಗೆ ಖಿನ್ನತೆಗೆ ಒಳಗಾಗಿದ್ದಾನೆ ಎಂದರು. ಬಿಜಿಎಸ್ ಇಕೋ ಕ್ಲಬ್ ಧರ್ಮೇಗೌಡ ಮಾತನಾಡಿದರು.