ಸಹಕಾರ ಒಕ್ಕೂಟ ಅಧ್ಯಕ್ಷರ ಆಯ್ಕೆ
ಹಾಸನ: ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷರಾಗಿ ದೊಡ್ಡ ಬೀಕನಹಳ್ಳಿ ನಾಗರಾಜ್ ಹಾಗೂ ಉಪಾಧ್ಯಕ್ಷರಾಗಿ ಪಾಳ್ಯದ ಪಿ.ಎಲ್. ನಿಂಗರಾಜ್ ಅವಿರೋಧವಾಗಿ ಆಯ್ಕೆಗೊಂಡರು.
ನಗರದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿರುವ ಜಿಲ್ಲಾ ಸಹಕಾರ ಒಕ್ಕೂಟದ ಯೂನಿಯನ್ನಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಈ ಎರಡು ಸ್ಥಾನಕ್ಕೆ ವಿರೋಧವಾಗಿ ಯಾರೂ ಸ್ಪರ್ಧಿಸದ ಕಾರಣ ಅವಿರೋಧವೆಂದು ಚುನಾವಣಾ ಅಧಿಕಾರಿ ಲೆಕ್ಕ ಪರಿಶೋಧನಾ ವಿಭಾಗದ ಉಪ ನಿರ್ದೇಶಕ ಹೆಚ್.ಎಂ. ಮಾದೇಗೌಡ ಘೋಷಣೆ ಮಾಡಿದರು.
ಇದೇ ವೇಳೆ ನಿರ್ದೇಶಕರಾದ ಆರ್.ಟಿ. ದ್ಯಾವೇಗೌಡ, ವಿ.ಎನ್. ರಾಜಣ್ಣ, ಬಿ.ಡಿ. ಚಂದ್ರೇಗೌಡ, ಕೆ. ಸತೀಶ್, ಪುಟ್ಟಸ್ವಾಮಿಗೌಡ, ಕೆ.ಎನ್. ಪದ್ಮರಾಜ್, ಶೇಷಾದ್ರಿ, ನಾಗರಾಜ್, ಹೆಚ್.ಜೆ. ಗಣೇಶ್, ಎಂ.ಎ. ನಾಗರಾಜ್, ಯೋಗಣ್ಣ, ಕೆ.ಬಿ. ನಾಗರಾಜೇಗೌಡ, ಎಂ. ಸುರೇಶ್ ಹಾಗೂ ಮಾಜಿ ಅಧ್ಯಕ್ಷ ಕಾರ್ಲೆ ಇಂದ್ರೇಶ್ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಅಭಿನಂದಿಸಿದರು.