ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹೊನ್ನವಳ್ಳಿಯಲ್ಲಿ ಗ್ರಾಮ ತರಬೇತಿ

Rashmi Kasaragodu
Updated On : 9 Jun 2014, 1:22 am

ಆಲೂರು: ಪ್ರಸಕ್ತ  ಸಾಲಿನ ಭೂಚೇತನ ಯೋಜನೆಯಡಿ ತರಬೇತಿ ಕಾರ್ಯಕ್ರಮವನ್ನು ತಾಲೂಕು ಪಾಳ್ಯ ಹೋಬಳಿ ಹೊನ್ನವಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.  ಅಧ್ಯಕ್ಷತೆ ವಹಿಸಿದ್ದ ಪಾಳ್ಯ ಗ್ರಾಮ ಪಂಚಾಯ್ತಿ ಸದಸ್ಯ ಪುಟ್ಟಸ್ವಾಮಿ ಮಾತನಾಡಿ, ರೈತ ಸಂಪರ್ಕ ಕೇಂದ್ರದಲ್ಲಿ ದೊರೆಯುವ ತಾಂತ್ರಿಕ ಮಾಹಿತಿಗಳನ್ನು  ಪಡೆದು ಬೆಳೆ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಸಾಗಬೇಕೆಂದು ರೈತರಿಗೆ ಸಲಹೆ ನೀಡಿದರು.  ಮುಖಂಡ ಹೊನ್ನಯ್ಯ ಮಾತನಾಡಿದರು. ಧರ್ಮಪ್ಪ, ದ್ಯಾವಪ್ಪ,  ನಂಜಪ್ಪ, ಕುಮಾರೇಗೌಡ, ಸುಶೀಲಮ್ಮ, ವಸಂತಕುಮಾರ್ ಇತರರು ಇದ್ದರು.
'ಪರಿಸರದ ಕಾಳಜಿ  ಅಗತ್ಯ'
ಆಲೂರು: ಮಿತಿ ಮೀರಿದ  ಇಂಧನದ ಬಳಕೆಯಿಂದಾಗಿ  ನೈಸರ್ಗಿಕ  ಇಂಧನ ಮೂಲಗಳು ಕಡಿಮೆಯಾಗುತ್ತಿದೆ ಎಂದು  ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ನೀಲಫರ್ ಹೇಳಿದರು. ಅವರು ಪಟ್ಟಣದ ಸರ್ಕಾರಿ ನೂತನ ಹಿರಿಯ ಪ್ರಾಥಮಿಕ  ಶಾಲೆ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ  41ನೇ ವಿಶ್ವ  ಪರಿಸರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಶಆಲಾ ಮುಂಭಾಗದಲ್ಲಿ  ಗಿಡ ನೆಟ್ಟು ಮಾತನಾಡಿದ ಅವರು,  ಮರಗಳನ್ನು  ನೆಟ್ಟು ಬೆಳೆಸಿದರೆ  ಉತ್ತಮವಾದ ಆರೋಗ್ಯ  ಪ್ರಾಪ್ತಿಯಾಗುತ್ತ, ಭೂ ಸವಕಳಿ ಆಗುವುದಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement