ಆಧ್ಯಾತ್ಮಿಕ ಜಾಗೃತಿಯಿಂದ ಬದುಕು ಹಸನು
ರಾಮನಾಥಪುರ: ಮನುಷ್ಯನ ಬದುಕು ಹಸನಾಗಬೇಕಾದರೆ ಆಧ್ಯಾತ್ಮಿಕ ಜಾಗೃತಿಯಿಂದ ಮಾತ್ರ ಸಾಧ್ಯ ಎಂದು ಅರಸೀಕೆರೆ ತಾ. ಮಾಡಾಳು ಶ್ರೀ ಗುರು ಬಸವ ಕುಮಾರಾಶ್ರಮದ ಶ್ರೀ ತೋಟದಾರ್ಯ ಸ್ವಾಮೀಜಿ ಹೇಳಿದರು.
ರಾಮನಾಥಪುರ ಹೋಬಳಿ ಶಿರದನಹಳ್ಳಿ ಬಸವಕಲ್ಯಾಣ ಶ್ರೀಮಠದ ನಿರಂಜನ ಶ್ರೀ ಸಿದ್ದಲಿಂಗಸ್ವಾಮೀಜಿ ಅವರ ಪಟ್ಟಾಧಿಕಾರ ಮಹೋತ್ಸವದ ಪ್ರಯುಕ್ತ ಭಾನುವಾರ ನಡೆದ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅಶೀರ್ವಚನ ನೀಡಿದರು. ಮಠಗಳಿಗೆ ಅಸ್ತಿ ಇದ್ದರೆ ಮಾತ್ರ ಕೆಲವು ಸ್ವಾಮೀಜಿಗಳು ಮಠಾಧಿಪತಿಗಳಾಗಲು ಇಷ್ಟಪಡುತ್ತಾರೆ. ಅದರೆ ಶಿರದನಹಳ್ಳಿ ಬಸವಕಲ್ಯಾಣ ಮಠದ ನೂತನ ಸಿದ್ದಲಿಂಗ ಶ್ರೀಗಳು ಭಕ್ತರೇ ಆಸ್ತಿ ಎಂದು ನಂಬಿಕೊಂಡು ಪಟ್ಟಾಧಿಕಾರ ವಹಿಸಿಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಪ್ರತಿಯೊಂದು ಸಾಧನೆಗೂ ಗುರುವಿನ ಮಾರ್ಗದರ್ಶನ ಅಗತ್ಯವಾಗಿದೆ ಎಂದರು.
ಬೆಟ್ಟದಪುರ ಸಲೀಲಾಖ್ಯ ಮಠದ ಶ್ರೀ ಚನ್ನಬಸವದೇಶಿಕೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನುಷ್ಯ ಮಾನವೀತೆಯನ್ನು ಮರೆತು ಜೀವನ ಸಾಗುಸುತ್ತಿರುವುದು ದುರದೃಷ್ಟಕರ ಎಂದು ತಿಳಿಸಿ ಜಗತ್ತಿನ ಎಲ್ಲಾ ರಾಷ್ಟ್ರಗಳು ವೈಜಾನಿಕವಾಗಿ ವೇಗವಾಗಿ ಮುಂದುವರಿಯುತ್ತಿದ್ದು ನೈತಿಕ ಮೌಲ್ಯಗಳನ್ನು ಕಡೆಗಣಿಸುತ್ತಿದೆ. ಮಾನವನ ಇಂದಿನ ಅಶಾಂತಿ ಯುತ ಬದುಕಿಗೆ ಬಸವಾದಿ ಶಿವ ಶರಣರ ತತ್ವಚರಣೆಯೊಂದೆ ಮರಿಹಾರ ಎಂದು ತಿಳಿಸಿದರು. ಕರ್ಪೂರವಳ್ಳಿ ಜಂಗಮ ಮಠದ ಶ್ರೀ ಚಂದ್ರಶೇಖರಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಧಾಟಿಸಿ ಆಶೀರ್ವಚನ ನೀಡಿ, ನೆಮ್ಮದಿ ಜೀವನಕ್ಕಾಗಿ ಪ್ರತಿಯೊಬ್ಬರೂ ಅನ್ಯಮಾರ್ಗದಲ್ಲಿ ನಡೆಯಬೇಕು ಎಂದರು.
ಸೋಮವಾರಪೇಟೆ ಶ್ರೀ ವಿಶ್ವೇಶ್ವರಸ್ವಾಮೀಜಿ ದ್ವಜಾರೋಹಣ ನೇರವೇರಿಸಿ ಮಾತನಾಡಿದರು. ಟಿ. ಮಾಯಿಗೌಡನಹಳ್ಳಿ ರಾಜಾಪುರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿಯವರು ನೇತೃತ್ವ ವಹಿಸಿದ್ದರು. ನೂತನ ಪಟ್ಟಾಧಿಕಾರಿಗಳಾದ ಶ್ರೀ ಸಿದ್ದಲಿಂಗಸ್ವಾಮೀಜಿ ಅವರು ಸದಾಶಯ ನುಡಿಗಳನ್ನಾಡಿದರು. ಕಲ್ಲುಮಠ ಶ್ರೀ ಮಹಾಂತಸ್ವಾಮೀಜಿ, ಕಿರಿಕೊಡ್ಲಿ ಮಠ ಸದಾಶಿವಚಾರ್ಯಸ್ವಾಮಿಗಳು, ದೊಡ್ಡಮಠದ ಮಲ್ಲಿಕಾಜುನಸ್ವಾಮಿಜಿ, ಸರಗೂರು ಮಠ ಮೃತ್ಯಂಜಯಸ್ವಾಮೀಜಿ, ಕರ್ತಾಳು ಮಠರೇಣುಕ ರಾಜಶೇಖರ ಶಿವಾಚಾರ್ಯಸ್ವಾಮೀಜಿ, ಅಂಕನಹಳ್ಳಿ ಮಠ ವಿಜಯಕುಮಾರ ಸ್ವಾಮೀಜಿ, ಬಸವಕಲ್ಯಾಣ ಮಠಕ್ಕೆ ಈಗ ಮಠಾಧ್ಯಕ್ಷರಾಗುತ್ತಿರುವ ಸಿದ್ದಲಿಂಗಸ್ವಾಮೀಜಿ ಅವರ ತಂದೆ ತಾಯಿಗಳಾದ ಅಥಣಿ ತಾ. ಸವದಿ ಗ್ರಾಮದ ಶರಣರಾದ ಭಗವ್ವ ಶಿವಯ್ಯಸ್ವಾಮಿ ಇತರರು ಇದ್ದರು.