ಇಬ್ಬರ ಬಂಧನ
ಚನ್ನರಾಯಪಟ್ಟಣ: ಆಹಾರ ಇಲಾಖೆ ಹಾಗೂ ಪಟ್ಟಣ ಪೊಲೀಸರು ಪಟ್ಟಣದ ವಿವಿಧೆಡೆ ಖಾಸಗಿ ಗ್ಯಾಸ್ ಏಜನ್ಸಿಗಳ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಗ್ಯಾಸ್ ರಿಫಿಲ್ಲಿಂಗ್ ಮಾಡುತ್ತಿದ್ದವರನ್ನು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪಟ್ಟಣದ ನಾಗಸಮುದ್ರ ರಸ್ತೆ ಹಾಗೂ ಹೊಸ ಬಸ್ ನಿಲ್ದಾಣದ ಬಳಿಯಿರುವ ಖಾಸಗಿ ಗ್ಯಾಸ್ ಏಜನ್ಸಿಯವರು ಆಹಾರ ಇಲಾಖೆ ವತಿಯಿಂದ ನೀಡುತ್ತಿರುವ ಸಬ್ಸಿಡಿ ಸಿಲಿಂಡರ್ಗಳನ್ನು ಸಂಗ್ರಹಿಸಿಅವುಗಳಿಂದ ವಾಣಿಜ್ಯೋದ್ದೇಶದ ಸಿಲಿಂಡರ್ಗಳಿಗೆ ಗ್ಯಾಸ್ ರಿಫಿಲ್ಲಿಂಗ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ದಾಳಿ ನಡೆಸಿ ಅವರಿಂದ 37ಸಿಲಿಂಡರ್ಗಳು, ತೂಕದ ಯಂತ್ರ, ಹಾಗೂ ಇತರೆ ಸಾಮಾಗ್ರಿಗಳು ಸೇರಿದ್ದು, ಇವುಗಳಲ್ಲಿ 10 ಸಿಲಂಡರ್ಗಳು ಎಚ್. ಪಿ ಕಂಪನಿಗೆ ಸೇರಿದವುಗಳಾಗಿವೆ ಎಂದು ಪೋಲಿಸರು ತಿಳಿಸಿದ್ದಾರೆ. ಏಜನ್ಸಿ ಮಾಲಿಕರಾದ ಕೃಷ್ಣ ಮತ್ತು ಮುರುಳಿ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದು, ದಾಳಿ ಸಂದರ್ಭದಲ್ಲಿ ತಲೆ ತಪ್ಪಿಸಿಕೊಂಡ ಸ್ವಾಮಿ ಮೇಲೆ ದೂರು ದಾಖಲಿಸಿ ಪತ್ತೆಗಾಗಿ ಬಲೆ ಬೀಸಿದ್ದಾರೆ. ಪಟ್ಟಣ ಪೋಲಿಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.