ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಳಪೆ ಕಾಮಗಾರಿ ತಡೆ ಹಿಡಿದ ಗ್ರಾಮಸ್ಥರು

Rashmi Kasaragodu
Updated On : 10 Jun 2014, 12:53 pm

ಹಾಸನ: ಮಾಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಚನ್ನರಾಯಪಟ್ಟಣ ತಾಲೂಕು ಕೆಂಬಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿ ಕಳಪೆ ಆಗಿದೆ ಎಂದು ನೂರಾರು ಗ್ರಾಮಸ್ಥರು ಕಾಮಗಾರಿಯನ್ನು ಸೋಮವಾರ ತಡೆ ಹಿಡಿದಿದ್ದಾರೆ.
ಗ್ರಾಮದ ಮುಖಂಡ ಕೆ. ಬಿ. ಜಯಚಂದ್ರ ಮಾತನಾಡಿ ಕೆಂಬಾಳು ಗ್ರಾಮ ಪಂಚಾಯ್ತಿ ವತಿಯಿಂದ ವಕ್ಕಣೆ ಕಣ, ಸರ್ಕಾರಿ  ಆಸ್ಪತ್ರೆಯ ಹತ್ತಿರದ ಚರಂಡಿ, ಕಚೇರಿಯ ಮೇಲೆ ಚುರ್ಕಿ ಹಾಗೂ ಇನ್ನು ಅನೇಕ ಕೆಲಸಗಳು ಕಳಪೆ ಕಾಮಗಾರಿಯಾಗಿದೆ. ಗ್ರಾಮದಲ್ಲಿ 172 ಬೋರ್ವೆಲ್ಗಳಿದ್ದು ಇದರ ಮರುಜೋಡಣೆಯಾಗಿದೆ. ಆದರೆ ಹಳೇ ಪದಾರ್ಥಗಳು ಎಲ್ಲಿ ಹೋದವು ಹಾಗೂ ಬೀದಿ ಲೈಟುಗಳನ್ನು ಖರೀದಿಸಿದ ಬಿಲ್ಲುಗಳು ಸಹ ಇಲ್ಲ. ಇತ್ಯಾದಿಗಳ ಬಗ್ಗೆ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳು, ಜಿಪಂ ಕಾರ್ಯದರ್ಶ್ ಮತ್ತಿತರ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಕೆ. ಎಲ್. ಬಾಬು, ನಾಗರಾಜ್, ಪಾರ್ಥ, ಲಿಂಗರಾಜು, ದೇವರಾಜ್, ಕೆ. ಆರ್. ಸ್ವಾಮಿ, ಕೆ. ಎನ್. ದಿನೇಶ್, ಉದಯಕುಮಾರ್ ಮತ್ತಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement