ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ರಾಜ್ಯ, ಕೇಂದ್ರ ಸರ್ಕಾರಗಳು ಸ್ಪಂದಿಸಲಿ: ಎಚ್ಕೆಕೆ

Rashmi Kasaragodu
Updated On : 10 Jun 2014, 12:54 pm

ಸಕಲೇಶಪುರ: ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಕಾರಾತ್ಮಕವಾಗಿ ಸ್ಪಂದಿಸಿ ಪರಿಹಾರ ದೊರಕಿಸಿ ಕೊಡಬೇಕು ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಸೋಮವಾರ ಪಟ್ಟಣದ ರಾಘವೇಂದ್ರನಗರ ಬಡಾವಣೆಯಲ್ಲಿ ಹಾಸನ ಜಿಲ್ಲಾ ಕಾಫಿ ಬೆಳೆಗಾರರ ಸಂಘದ ಹೆಚ್ಚುವರಿ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿರುವ ಕಾಪಿ, ಏಲಕ್ಕಿ ಹಾಗೂ ಮೆಣಸು ಬೆಳೆಗಾರರ ಸರ್ವತೋಮುಖ ಬೆಳವಣಿಗೆಗೆ ಅವಿರತವಾಗಿ ಶ್ರಮಿಸುತ್ತಿರುವ ಬೆಳೆಗಾರರ ಸಂಘ ಬೆಳೆಗಾರರು ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದೊಂದಿಗೆ ನಿರಂತರ ಹೋರಾಟ ನಡೆಸಿ ಪರಿಹಾರ ಕಂಡುಕೊಂಡಿದ್ದಾರೆ ಎಂದರು.
 ಇಂದಿಗೂ ಎತ್ತಿನಹೊಳೆ ಯೋಜನೆ, ಕಾಡಾನೆ, ಟಿಂಬರ್, ಒತ್ತುವರಿ ತೆರವಿನಂತಹ ಬಹತ್ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಹೋರಾಟ ನಡೆಸುತ್ತಿದೆ. ಅಕಾಲಿಕ ಮಳೆ, ಕಾಂಡಕೊರಕದಂತಹ ರೋಗಗಳಿಂದ ಬೆಳೆಗಾರರು ನಷ್ಟ ಹೊಂದಿ ಮಾನಸಿಕ ಸ್ಥೈರ್ಯ ಕಳೆದುಕೊಳ್ಳುವ ರೈತರ ಬೆನ್ನಲುಬಿಗೆ ನಿಂತಿರುವ ಸಂಘದ ಸಾದನೆ ಶ್ಲಾಘನೆಗೆ ನಿಲುಕದಾಗಿದೆ. ಇಂತಹ ಸಂಘ ಪ್ರತಿವರ್ಷ ಹೊಸದೊಂದು ಸಾದನೆ ಮಾಡುವ ಮೂಲಕ ಪ್ರಗತಿ ಹಂತದಲ್ಲಿರುವುದನ್ನು ಸೂಚಿಸುತ್ತಿದೆ ಎಂದರು.
ಹಾಸನ ಬೆಳೆಗಾರರ ಸಂಘದ ಅಧ್ಯಕ್ಷ ಕೃಷ್ಣಪ್ಪ, ಮಾಜಿ ಅಧ್ಯಕ್ಷ ಮುಜಾಹೀದ್ ಆಲಂ,ಉದಯಕುಮಾರ, ಕರ್ನಾಟಕ ಬೆಳೆಗಾರರ ಸಂಘದ ಕಾರ್ಯದರ್ಶಿ ತೀರ್ಥ ಮಲ್ಲೇಶ್, ಮೋಹನ್ ಕುಮಾರ್, ಪ್ರಕಾಶ ಮೊದಲಾದವರು ಇದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement