ಕೊಬ್ಬರಿ ಬೆಲೆ ಏರಿಕೆ
ಜಾವಗಲ್: ಜಾವಗಲ್ನ ಭಾನುವಾರದ ಸಂತೆಯಲ್ಲಿ ಕೊಬ್ಬರಿ ಬೆಲೆಯು 11500ನಿಂದ 12500ಗೆ ಏರಿಕೆ ಕಂಡಿತು. ತೆಂಗಿನಕಾಯಿ ಬೆಲೆಯಲ್ಲಿ ಇಳಿಕೆ ಕಂಡುಬಂದು 1000ಕ್ಕೆ 14-15000 ರು. ಗಳಾಗಿತ್ತು. ಕಳೆದ 5-6ತಿಂಗಳಿಂದ ಕಿ.ಲೋ.1ರ ಬೆಲೆ 10 ಗಳಾಗಿದ್ದು. ದಿಢೀರನೆ 15 ರಿಂದ 20ಗೆ ಏರಿಕೆಕಂಡಿತು. ತರಕಾರಿಗಳಬೆಲೆಯಲ್ಲಿ ಏರಿಕೆಕಂಡು ಬೀನ್ಸ್ ಕಿಲೋಗೆ 60, ಕ್ಯಾರೆಟ್, ಬೆಂಡೆಕಾಯಿ ಕೆಜಿಗೆ 40 ರು , ಆಲೂಗಡ್ಡೆ, ಗೆಡ್ಡೆಕೋಸು ಒಂದು ಕೇಜಿಗೆ 30, ಬದನೆ, ಮೂಲಂಗಿ 1 ಕೆಜಿಗೆ 20, ಟೊಮೆಟೋ ಕಿಲೋ 1ಕ್ಕೆ 15, ಬೆಲ್ಲ ಕಿಲೋ 1ಕ್ಕೆ 45ರಿಂದ 50 ಗಳಾಗಿತ್ತು. ಮಳೆ ಇಲ್ಲದೆ ತರಕಾರಿಗಳ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ಗ್ರಾಹಕರು ತಮ್ಮ ತಮ್ಮಲ್ಲಿ ಅನಿಸಿಕೆ ವ್ಯಕ್ತಪಡಿಸುತ್ತಿದ್ದರು.