'ಕ್ರಿಮಿನಾಶಕ ಬಳಕೆಯಿಂದ ಭೂಮಿ ಫಲವತ್ತತೆ ಕ್ಷೀಣ'
ಜಾವಗಲ್: ಅತಿಯಾದ ರಸಗೊಬ್ಬರ, ಕ್ರಿಮಿನಾಶಕಗಳ ಬಳಕೆಯಿಂದ ಭೂಮಿಯ ಫಲವತ್ತತೆ ಕಡಿಮೆಯಾಗುತ್ತದೆ ಎಂದು ತಾಪಂ ಸದಸ್ಯೆ ರಾಜೇಶ್ವರಿ ಶಿವಾನಂದ್ ಅಭಿಪ್ರಾಯಪಟ್ಟರು.
ಜಾವಗಲ್ ಹೋಬಳಿ ತಿಮ್ಮನಹಳ್ಳಿಯಲ್ಲಿ ಭಾನುವಾರ ಏರ್ಪಡಿಸಿದ್ದ ಗುಚ್ಚಗ್ರಾಮ ಮಟ್ಟದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತೀಚಿನ ದಿನಗಳಲ್ಲಿ ರೈತರಿಗೆ ಇದರ ಅರಿವಾಗುತ್ತಿದ್ದು, ಭೂಚೇತನ ಪರಿಕರಗಳು, ಲಘುಪೋಷಕಾಂಶಗಳನ್ನು ಬಳಕೆಮಾಡಿಕೊಳ್ಳಬೇಕು ಜೊತೆಗೆ ತಾಂತ್ರಿಕತೆಯನ್ನು ಬಳಸಿಕೊಂಡು ಅಧಿಕ ಇಳುವರಿ ಪಡೆಯುವಂತೆ ತಿಳಿಸಿದರು. ಸಾವಯವ ಕೃಷಿ ಸಂಘದ ಅಧ್ಯಕ್ಷ ಎಂ. ವಿಜಯಕುಮಾರ್ ಮಾತನಾಡಿ, ಸಾವಯವ ಕೃಷಿಗೆ ಒತ್ತು ನೀಡಿ ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕೆಂದರು. ಕೃಷಿ ಅಧಿಕಾರಿ ಡಿ.ಎಸ್. ಕುಮಾರಸ್ವಾಮಿ ಮಾತನಾಡಿದರು. ಟಿ.ಅರ್. ಬಸವರಾಜ, ಕೃಷಿಕರಾದ ಟಿ.ಎಂ. ರಾಜು, ನಂಜುಂಡಪ್ಪ, ಟಿ.ಎನ್.ಬಸವರಾಜು, ಅನುವುಗಾರರಾದ ಜಿ. ಬಸವರಾಜು, ಸಂತೋಷ್, ಪುನೀತ್, ಶಿಲ್ಪ ಇದ್ದರು.