ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನಾಯಿ ಕಡಿತ: ಬಾಲಕಿ ಆರೋಗ್ಯ ವಿಚಾರಿಸಿದ ಗೃಹ ಸಚಿವ ಜಾರ್ಜ್

Rashmi Kasaragodu
Updated On : 10 Jun 2014, 12:54 pm

ಹಾಸನ: ನಗರದ ಮಹಾರಾಜ ಉದ್ಯಾನವನದಲ್ಲಿ ಆಟವಾಡುತ್ತಿದ್ದಾಗ ಬೀದಿ ನಾಯಿಗಳು ಆಕ್ರಮಣ ನಡೆಸಿದ ಪರಿಣಾಮ ತೀವ್ರವಾಗಿ ಗಾಯಗೊಂಡು ಸರ್ಕಾರಿ ಆಸ್ಪತ್ರೆ ನಿಗ ಘಟಕದಲ್ಲಿ ಇರುವ ಬಾಲಕಿಯ ಆರೋಗ್ಯವನ್ನು ಸೋಮವಾರ ಗೃಹ ಸಚಿವ ಕೆ.ಜೆ. ಜಾರ್ಜ್ ವಿಚಾರಿಸಿ, 10 ಸಾವಿರ ರು. ಪರಿಹಾರ ನೀಡಿದರು.
ನಗರದಲ್ಲಿ ರಸ್ತೆ ಬದಿ ವ್ಯಾಪಾರ ಮಾಡಿ ಹೊಟ್ಟೆ ಪಾಡಿಗಾಗಿ ಜೀವನ ಸಾಗಿಸುವ ಶಾಂತಲ ಅವರ ಅಕ್ಕನ ಮಗಳು ಲಕ್ಷ್ಮಿ (4) ಎಂಬ ಬಾಲಕಿಗೆ ನಾಯಿಗಳು ಕಚ್ಚಿ ಗಾಯಗೊಳಿಸಿದೆ. ಈ ವೇಳೆ ಅಲ್ಲೆ ಇದ್ದ ಸಾರ್ವಜನಿಕರು ನಾಯಿಗಳ ಗುಂಪನ್ನು ಓಡಿಸಿ ಬಾಲಕಿಯನ್ನು ರಕ್ಷಿಸಿದ್ದು, ತಿಂಗಳಲ್ಲಿ 10 ಪ್ರಕರಣ ನಗರದಲ್ಲಿ ನಡೆದಿದೆ. ಇದುವರೆಗೂ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ನೀಡದ ಬಗ್ಗೆ ಜನರಿಂದ ದೂರು ಕೇಳಿ ಬಂದಿತು. ಇದೇ  ವೇಳೆ ಮಾತನಾಡಿದ ಗೃಹ ಸಚಿವರು, ನಾಯಿಗಳ ಹಾವಳಿಯಿಂದ ಜಿಲ್ಲೆಯಲ್ಲಿನ ಮಕ್ಕಳ ಆಕ್ರಮಣ ಕುರಿತಂತೆ ನಾನು ಮಾಧ್ಯಮದಿಂದ ತಿಳಿದಿದ್ದೇನೆ. ಈ ಬಾಲಕಿಗೆ ಎಲ್ಲಾ ರೀತಿಯ ಹೆಚ್ಚಿನ ಚಿಕಿತ್ಸೆ ನೀಡಲು ವೈದ್ಯರಿಗೆ ಸೂಚಿಸಿದರು. ಬೇಕಾದರೆ ಬೆಂಗಳೂರಿನ ಆಸ್ಪತ್ರೆಗೂ ಬಂದರೇ ವೆಚ್ಚ ಭರಿಸುವುದಾಗಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement