'ನಿವೃತ್ತ ಸರ್ಕಾರಿ ನೌಕರರು ಸಮಾಜಮುಖಿಗಳಾಗಲಿ'
ಬೇಲೂರು: ನಿವೃತ್ತ ನೌಕರರು ಅಪ್ರಯೋಜಕರಾಗದೆ ಸಮಾಜ ಮುಖಿಯಾಗಿ ಕೆಲಸ ಮಾಡಬೇಕು ಎಂದು ನಿವೃತ್ತ ತಹಸೀಲ್ದಾರ್ ಅಣ್ಣೇಗೌಡ ಹೇಳಿದ್ದಾರೆ.
ಸರ್ಕಾರಿ ನಿವೃತ್ತ ನೌಕರರ ಸಂಘದದ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ವಾರ್ಷಿಕ ಸಭೆಯಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡಿ, ಸರ್ಕಾರಿ ನೌಕರರು ನಿವೃತ್ತಿ ಹೊಂದಿದ ತಕ್ಷಣ ತಾವು ಕೆಲಸಕ್ಕೆ ಬಾರದವರು ಎಂದುಕೊಳ್ಳಬಾರದು, ಉತ್ಸಾಹಿಗಳಗಿರಬೇಕು ಎಂದರು.
ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಅನಂತರಾಮು ಮಾತನಾಡಿ, ನೌಕರರು ನಿವೃತ್ತಿ ಹೊಂದಿ ಕಚೇರಿ ಬಿಟ್ಟು ಬಂದ ತಕ್ಷಣ ನಮ್ಮದೆಲ್ಲಾ ಮುಗಿದೆ ಹೋಯಿತು ಎಂಬ ಭಾವನೆಯನ್ನು ಬಿಡಬೇಕು ಎಂದರರು. ಸರ್ಕಾರಿ ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಜೇಗೌಡ, ಮೂಗಣ್ಣಗೌಡ, ನಿಂಗೇಗೌಡ, ರಾಮೇಗೌಡ, ಬಿ.ಸಿ. ಮಂಜುನಾಥ್ ಇದ್ದರು.