ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನಿವೇಶನ ಹಕ್ಕು ಪತ್ರಗಳ ಪರಿಶೀಲನೆ

Rashmi Kasaragodu
Updated On : 10 Jun 2014, 12:54 pm

ಚನ್ನರಾಯಪಟ್ಟಣ: ಪಟ್ಟಣದ ಪುರಸಭೆ ವತಿಯಿಂದ 1998ರಲ್ಲಿ ನೀಡಿದ್ದ ನಿವೇಶನದ ಹಕ್ಕು ಪತ್ರಗಳ ಪರಿಶೀಲನೆ ಕಾರ್ಯ ಇಂದು ಪುರಸಭೆಯ ಅಧಿಕಾರಿಗಳು ಶಾಸಕ ಸಿ.ಎನ್ ಬಾಲಕೃಷ್ಣ ನೇತೃತ್ವದಲ್ಲಿ ನಡೆಯಿತು.
ಪುರಸಭೆ ವತಿಯಿಂದ ಕೆರೆ ಬೀದಿ ಮತ್ತು ನಾಗಸಮುದ್ರ ಬಳಿ ವಸತಿ ರಹಿತರಿಗೆ ನೀಡಿದ್ದ ನಿವೇಶನ ಹಕ್ಕು ಪತ್ರಗಳ ಪರಿಶೀಲನೆ ನಡೆಸಿ ಅವರಿಗೆ ಸಕ್ರಮ ಮಾಡಿಕೊಳ್ಳುವುದು ಸೇರಿದಂತೆ ಉಳಿದ ನಿವೇಶನಗಳ ಹಂಚಿಕೆಗಾಗಿ ಶಾಸಕ ಸಿ.ಎನ್ ಬಾಲಕೃಷ್ಣ ಅವರು ನಿವೇಶನ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದರು.
1998ರಲ್ಲಿ ಕೆರೆ ಬೀದಿಯಲ್ಲಿ ಲೇಔಟ್ ನಿರ್ಮಿಸಿ 83ನಿವೇಶನಗಳನ್ನು ಗುರುತಿಸಿ ಹಕ್ಕು ಪತ್ರಗಳನ್ನು ಪುರಸಭೆಯಿಂದ ನೀಡಿದ್ದು, ಅವುಗಳಲ್ಲಿ ಕೆಲವುಗಳನ್ನು ಮಾತ್ರ ಫಲಾನುಭವಿಗಳಿಗೆ ನೀಡಿ ಕೆಲ ಪ್ರಭಾವಿಗಳು ಹಕ್ಕುಪತ್ರಗಳನ್ನು ಯಾರಿಗೂ ನೀಡದೆ ತಾವೇ ಹೊಂದಿ, ತಮಗೆ ಬೇಕಾದವರಿಗೆ ಬರೆದುಕೊಟ್ಟಿದ್ದು ಪತ್ತೆಯಾಗಿದೆ.
ದಾಖಲಾತಿ ಪರಿಶೀಲನೆ ಸಂದರ್ಭದಲ್ಲಿ ಪುರಸಭೆ ವತಿಯಿಂದ ನೀಡಿರುವ ಹಕ್ಕುಪತ್ರಗಳನ್ನು 27 ಮಂದಿ ನೀಡಿದರೆ, 6ಮಂದಿ ಮೂಲ ದಾಖಲೆ ಬದಲಾಗಿ ಜರಾಕ್ಸ್ ಪ್ರತಿಗಳನ್ನು ನೀಡಿದರು. ಮೂಲ ಪ್ರತಿಗಳನ್ನು ನೀಡುವಂತೆ ಅವರಿಗೆ ಸೂಚನೆ ನೀಡಿದರೆ, ಉಳಿದವರು ತಮ್ಮ ಮೂಲ ದಾಖಲಾತಿ ನೀಡಲು ದಿನಾಂಕ ನಿಗದಿ ಮಾಡುವಂತೆ ಅಧಿಕಾರಿಗಳಿಗೆ ಶಾಸಕ ಸಿ.ಎನ್ ಬಾಲಕೃಷ್ಣ ತಿಳಿಸಿದರು. ಪುರಸಭಾಧ್ಯಕ್ಷ ಮಂಜಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್,  ಮುಖ್ಯಾಧಿಕಾರಿ ನಾಗರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement