ಪೊಲೀಸ್ ಠಾಣೆ ತೆರೆಯಲು ಗೃಹ ಸಚಿವರಿಗೆ ಕರವೇ ಮನವಿ
ಹಾಸನ: ನಗರದ ವಿದ್ಯಾನಗರ ಬಡಾವಣೆಯಲ್ಲಿ ಪೊಲೀಸ್ ಠಾಣೆ ತೆರೆಯುವಂತೆ ಕರವೇ ಮುಖಂಡರು ಸೋಮವಾರ ಗೃಹ ಸಚಿವ ಕೆ,ಜೆ, ಜಾರ್ಜ್ ಅವರಿಗೆ ಮನವಿ ಸಲ್ಲಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮನು ಕುಮಾರ್ ಮಾತನಾಡಿ, ಈಗ ನಗರದ ವಿದ್ಯಾನಗರ ದೊಡ್ಡ ಬಡಾವಣೆಯಾಗಿ ರೂಪಗೊಂಡಿದ್ದು, ಪೊಲೀಸ್ ಠಾಣೆ ತೆರೆಯಲು ಅವಶ್ಯಕ ಜನಸಂಖ್ಯೆ ಇದ್ದು, ಪ್ರತಿನಿತ್ಯ ಅಹಿತಕರ ಘಟನೆ ನಡೆಯುತ್ತಲೇ ಇದೆ. ಸಂಜೆ 6 ಗಂಟೆಯ ನಂತರ ಜನತೆ ಓಡಾಡಲು ಭಯ ಪಡುವ ಸ್ಥಿತಿ ಬಂದಿದೆ. ಯಾವುದೇ ದೂರನ್ನು ಎನ್.ಆರ್. ವೃತ್ತ ಠಾಣೆಗೆ ಬಂದು ದಾಖಲಿಸಬೇಕಾಗಿದೆ. ಜನರ ರಕ್ಷಣೆ ಸಲುವಾಗಿ ತಕ್ಷಣ ಪೊಲಿಸ್ ಠಾಣೆ ಈ ಭಾಗಕ್ಕೆ ನೀಡಬೇಕೆಂದು ಒತ್ತಾಯ ಮಾಡಿದರು.
ಜೆಎಸ್ಎಸ್ ಕಾಲೇಜಿನ ಫಲಿತಾಂಶ ಪ್ರಕಟ
ಮೈಸೂರು: ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ನಡೆಸಿದ ಏಪ್ರಿಲ್ ಮೇಜ್ಞಾ 2014ರ ಬಿ.ಎ, ಬಿ.ಎಸ್ಸಿ, ಬಿ.ಕಾಂ, ಬಿ.ಬಿ.ಎಂ. ಮತ್ತು ಬಿ.ಸಿ.ಎ. ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶವನ್ನು ಢಿಢಿಢಿ.ಞಡಡ್ಛಛ್ಛಡ.ಜಜ್ಡ.್ಝಟಿ ಮತ್ತು ಢಿಢಿಢಿ.್ಠಜಡ್ಡಟಡಿ.ಞಡಡ್ಛಛ್ಛಡ.ಜಜ್ಡ.್ಝಟಿ ವೆಬ್ಸೈಟ್ನಲ್ಲಿ ಪಡೆಯಬಹುದು ಎಂದು ಪ್ರಾಂಶುಪಾಲ ಪ್ರೊ.ಎಂ.ಬಿ. ಮಲ್ಲಿಕಾರ್ಜುನ ಪಂಡಿತ್ ತಿಳಿಸಿದ್ದಾರೆ.
ಮಹಿಳಾ ಕಾಲೇಜಿಗೆ ಪ್ರವೇಶ: ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿಗೆ ವಿಜ್ಞಾನ ವಿಭಾಗದ ಬಿ.ಎಸ್ಸಿನಲ್ಲಿ, ಕಲಾ ವಿಭಾಗದ ಬಿ.ಎ. ಹಾಗೂ ವಾಣಿಜ್ಯ ಪ್ರವೇಶ ಲಭ್ಯವಿದ್ದು, ಆಸಕ್ತರು ಪ್ರವೇಶಾತಿ ಪಡೆಯಬಹುದಾಗಿದೆ.
27 ಜೂಜುಕೋರರ ಬಂಧನ
ಹಾಸನ: ಜಿಲ್ಲೆಯ ಎರಡು ಕಡೆಯಲ್ಲಿ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿ 27 ಜನರನ್ನು ಪೊಲೀಸರು ಬಂಧಿಸಿ, 1,40,680 ನಗದನ್ನು ಹಾಗೂ 15 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಕಾಳತಮ್ಮನಹಳ್ಳಿ ಗ್ರಾಮದ ಗಡ್ಡದಕುಮಾರ್ ಜಮೀನಿನಲ್ಲಿರುವ ಕೋಳಿ ಫಾರಂ ಮನೆಯಲ್ಲಿ ಅಂದರ್ ಬಾಹರ್ ಆಡುತ್ತಿದ್ದರೆಂದು ಬಂದ ಖಚಿತ ಮಾಹಿತಿಯಿಂದ ಗ್ರಾಮಾಂತರ ಠಾಣೆಯ ಪಿಎಸ್ಐ ಪ್ರಮೋದ್ ಕುಮಾರ್ ಬಂಧಿಸಿದ್ದಾರೆ.
ಅಕ್ರಮ ಮರಳು: ಬಂಧನ
ಅರಕಲಗೂಡು: ಕೊಣನೂರು ಪೊಲೀಸ್ ಠಾಣೆಯ ಎಎಸ್ಐ ಸುಬ್ಬರಾಜೆ ಅರಸ್ ಅವರು ಸಿಬ್ಬಂದಿ ಜತೆ ರಾಮನಾಥಪುರದ ಕಡೆ ಗಸ್ತಿನಲ್ಲಿ ರಾಮನಾಥಪುರ ಸೇತುವೆ ಹತ್ತಿರ ಮಲ್ಲಿಪಟ್ಟಣದ ಕಡೆಯಿಂದ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಟ್ರ್ಯಾಕ್ಟರ್ನಲ್ಲಿ ಮರಳು ತುಂಬಿಕೊಂಡು ಬರುತ್ತಿದ್ದ ವಾಹನವನ್ನು ತಡೆದು ಆತನನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಕಟ್ಟೇಪುರದವನಾಗಿ ದ್ದಾನೆ. ವ್ಯಕ್ತಿಯಾಗಿದ್ದಾನೆ. 3,000 ಬೆಲೆಯ ಟ್ರ್ಯಾಕ್ಟರ್ ಸಮೇತ ಮರಳನ್ನು ವಶಪಡಿಸಿಕೊಂಡು ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.