ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಆಶ್ವಾಸನೆ ಬೇಡ, ನೀರು ಬೇಕು

Rashmi Kasaragodu
Updated On : 11 Jun 2014, 2:01 am

ಹಾರನಹಳ್ಳಿ: ಯಗಚಿ ನದಿ ಮೂಲಕ ಕೆರೆಗೆ ನೀರು ಹರಿಸಬೇಕೆಂದು ಆಗ್ರಹಿಸಿ ಅರಸೀಕೆರೆ ತಾಲೂಕಿನ ಹಾರನಹಳ್ಳಿ ಸುತ್ತಮುತ್ತಲಿನ ರೈತರು ನಡೆಸುತ್ತಿರುವ ಪ್ರತಿಭಟನೆ 2 ನೇ ದಿನವಾದ ಮಂಗಳವಾರವೂ ಮುಂದುವರಿದಿದೆ.
ಈ ಭಾಗದ ಕೆರೆ ಅಚ್ಚುಕಟ್ಟು ಪ್ರದೇಶದ ರೈತರು ಮತ್ತು  ರೈತ ಸಂಘದ ಮುಖಂಡರು ಹಾರನಹಳ್ಳಿ ಗ್ರಾಮ ಮುಂಭಾಗದಲ್ಲಿ ಹಾದು ಹೋಗಿರುವ ಅರಸೀಕೆರೆ ಹಾಸನ ರಾಜ್ಯಮುಖ್ಯ ರಸ್ತೆಯಲ್ಲಿ ಧರಣಿ ಕುಳಿತು ರಸ್ತೆ ತಡೆ ನಡೆಸಿದರು. ಪ್ರತಿಭಟನೆಯಲ್ಲಿ ಸ್ತ್ರೀಶಕ್ತಿ ಸಂಘದ ಸದಸ್ಯೆಯರು ಭಾಗವಹಿಸಿದ್ದರು.
ಆಶ್ವಾಸನೆ ಬೇಡ, ನೀರು ಬೇಕು: ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಗೌಸ್ ಅಹಮದ್ ಮಾತನಾಡಿ, ಈ  ಭಾಗದಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಇಂತಹ ಸ್ಥಿತಿ ನಿರ್ಮಾಣವಾದರೂ ಅಧಿಕಾರಿಗಳು ರೈತರ ಬಗ್ಗೆ ನೀರಾವರಿ ಯೋಜನೆರೂಪಿಸಲು ಮುಂದಾಗದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಶಾಸಕರು, ಸಂಸದರು ಬರೀ ಅಶ್ವಾಸನೆಗೆ ಸೀಮಿತವಾಗದೆ ನಮ್ಮ ಬೇಡಿಕೆಗೆ ಈಡೇರಿಸಬೇಕು. ಯಗಚಿ ನದಿಯಿಂದ ಕುಡಿಯುವ ನೀರು ಕೊಡಬೇಕೆಂದು ಒತ್ತಾಯಿಸಿದರು. ಕಾವೇರಿ ನೀರಾವರಿ ನಿಗಮ ದಿಂದ ನೀರಾವರಿ ಯೋಜನೆ ರೂಪಿಸುವ ಬಗ್ಗೆ ಅನೇಕ ಪತ್ರಗಳು ಬಂದಿದ್ದು, ಅವೆಲ್ಲಾ ಕಡತದಲ್ಲಿ ಧೂಳು ಹಿಡಿಯುತ್ತಿದೆ ಎಂದುರೈತ ಸಂಘ ಮುಖಂಡ ಕನ್ನಕಂಚನಹಳ್ಳಿ ಪ್ರಸನ ಕುಮಾರ್ ಆರೋಪಿಸಿದರು.
ಯೋಜನೆ ರೂಪಿಸಿ: ಗ್ರಾಮ ಪಂಚಾಯತಿ
ಮಾಜಿ ಅಧ್ಯಕ್ಷ ನಂದೀಶ್ ಮಾತನಾಡಿ, ಕೃಷ್ಣ  ಕಣಿವೆಗೆ ಯಗಚಿ ಯೋಜನೆ ಸೇರಿದೆ ಎಂದು  ನುಣಿಚಿಕೋಳುವುದನು ಬಿಟ್ಟು, ಯಗಚಿ ನದಿಯು ಮಳೆಗಾಲದಲ್ಲಿ 3ತಿಂಗಳು ಹೆಚ್ಚು ಪ್ರವಾಹವಾಗಿ ಸಮುದ್ರ ಸೇರುವ ಬದಲು ನೀರನ್ನು ಬೇಲೂರು, ಅರಸೀಕೆರೆ ತಾಲೂಕಿಗೆ ಕುಡಿಯುವ ನೀರಿನ ಯೋಜನೆ ರೂಪಿಸಬಹುದಾಗಿದೆ ಎಂದರು.
ಪ್ರತಿಭಟನೆಯಲ್ಲಿ ಗುರುಲಿಂಗಪ್ಪ, ಬಸವರಾಜು, ಆಟೋ ಚಾಲಕ ಸಂಘದವರು, ಕೋಡಿಕೊಪ್ಪಲು, ಗುತ್ತಿನಕೆರೆ, ಹೆಬ್ಬಾರನಹಳ್ಳಿ, ಕರಗುಂದ ಸುತ್ತಮುತ್ತಲ ಗ್ರಾಮಗಳ ರೈತರು, ಸ್ತ್ರೀ ಶಕ್ತಿ ಸಂಘದವರು, ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement